ಕೋಡಿಂಬಾಳದ ಬಜಕರೆಯಲ್ಲಿ ನೂತನ ರೈಲ್ವೇ ಸೇತುವೆ ಬಳಿ ರಸ್ತೆ ಕುಸಿತ

kadaba times

ಕೇಂದ್ರ ಸರ್ಕಾರದ ‘ಅಮೃತ ಭಾರತ್’ ಯೋಜನೆಯಡಿ ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಬಜಕರೆಯಲ್ಲಿ ನಿರ್ಮಿಸಲಾದ ನೂತನ ರೈಲ್ವೇ ಮೇಲ್ಸೇತುವೆಯ ಸಂಪರ್ಕ ಕಾಂಕ್ರೀಟ್ ರಸ್ತೆ ನಿರಂತರ ಮಳೆಗೆ ಕುಸಿದುಬಿದ್ದಿದೆ. ಅವೈಜ್ಞಾನಿಕ ಹಾಗೂ ಅವಸರದ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ತಕ್ಷಣವೇ ರಸ್ತೆ ಹಾಗೂ ತಿರುವನ್ನು ಸರಿಪಡಿಸುವಂತೆ ಆಗ್ರಹ ವ್ಯಕ್ತವಾಗಿತ್ತು.ಇದೀಗ ಸ್ಥಳದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. 

kadaba times
uniq

ಕಡಬ / 102 ನೆಕ್ಕಿಲಾಡಿ: ಕೇಂದ್ರ ಸರ್ಕಾರದ ‘ಅಮೃತ ಭಾರತ್’ ಯೋಜನೆಯಡಿ ಮೈಸೂರು ರೈಲ್ವೇ ವಿಭಾಗದ ವ್ಯಾಪ್ತಿಗೆ ಒಳಪಡುವ ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಮಧ್ಯೆ ನಿರ್ಮಿಸಲಾಗುತ್ತಿರುವ ನಾಲ್ಕು ರೈಲ್ವೇ ಮೇಲ್ಸೇತುವೆಗಳ (Railway Overbridges) ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿವೆ.

ಆದರೆ, ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಬಜಕರೆ ಎಂಬಲ್ಲಿ ನಿರ್ಮಾಣವಾದ ರೈಲ್ವೇ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ನೂತನ ಕಾಂಕ್ರೀಟ್ ರಸ್ತೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಳಭಾಗದ ಮಣ್ಣು ಕೊಚ್ಚಿಹೋಗಿದೆ . 

 ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ಒಟ್ಟು ₹24 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರೈಲ್ವೇ ಹಳಿಯಿಂದ ಸುಮಾರು 6.53 ಮೀಟರ್ ಎತ್ತರ, 7.5 ಮೀಟರ್ ಅಗಲ ಹಾಗೂ 10 ಮೀಟರ್ ಉದ್ದದ ಸುಸಜ್ಜಿತ ಮೇಲ್ಸೇತುವೆಗಳು ಹಾಗೂ ಕಾಂಕ್ರೀಟ್ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದೆ.

kadaba times
kadaba times

ಆದರೆ ಬಜಕರೆಯಲ್ಲಿ ನಿರ್ಮಿಸಲಾದ ಈ ಸಂಪರ್ಕ ರಸ್ತೆಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.  ಕಾಮಗಾರಿಯನ್ನು ತುರ್ತಾಗಿ ಮುಗಿಸುವ ಭರದಲ್ಲಿ ಗುಣಮಟ್ಟವನ್ನು ಗಾಳಿಗೆ ತೂರಿ ರಸ್ತೆ ನಿರ್ಮಿಸಿದ್ದರಿಂದಲೇ ,  ಮಳೆಯ ನೀರಿಗೆ ತಡೆಗೋಡೆ ಹಾಗೂ ರಸ್ತೆಯ ತಳಭಾಗದ ಮಣ್ಣು ಸಡಿಲಗೊಂಡು ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಮೂಡಿ ಕುಸಿಯುವ ದುಸ್ಥಿತಿಗೆ ತಲುಪಿದೆ ಎಂದು ದೂರಲಾಗಿದೆ.

ದುರಸ್ತಿ ಕಾರ್ಯ ಆರಂಭ : ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಥಳೀಯರು ಸಲ್ಲಿಸಿದ್ದ ಸುದೀರ್ಘ ಮನವಿಯ ಫಲವಾಗಿ ಕೋರಿಯಾರ್ ಹಾಗೂ ಬಜಕರೆಯಲ್ಲಿ ಈ ರೈಲ್ವೇ ಮೇಲ್ಸೇತುವೆಗಳು ಮಂಜೂರಾಗಿದ್ದವು. ಆದರೆ ಈಗ ನಿರ್ಮಿಸಲಾಗಿರುವ ರಸ್ತೆಯು ಅಪಾಯಕಾರಿಯಾಗಿದ್ದು, ಗುತ್ತಿಗೆ ಸಂಸ್ಥೆಯು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕುಸಿದಿರುವ ಕಾಂಕ್ರೀಟ್ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸಬೇಕು. ಅಲ್ಲದೆ ಅವೈಜ್ಞಾನಿಕವಾಗಿ ಮಾಡಲಾಗಿರುವ ರಸ್ತೆ ತಿರುವನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುರಕ್ಷಿತಗೊಳಿಸಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯ ವಾಹನ ಚಾಲಕರುಆಗ್ರಹಿಸಿದ್ದರು. ಇದೀಗ ಸ್ಥಳದಲ್ಲಿ ರಸ್ತೆಯ ಕಾಮಗಾರಿ ದುರಸ್ತಿ ಮಾಡಲು ಗುತ್ತಿಗೆದಾರರು ಮುಂದಾಗಿದ್ದಾರೆ.

Related Articles

Latest Articles