ನಾಳೆ (ಆಗಸ್ಟ್ 6ರಂದು)ಕಡಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:ಪ್ರಾಕೃತಿಕ ವಿಕೋಪ ಹಾನಿ ಪರಿಶೀಲನೆ

kadaba times

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆಗಸ್ಟ್ 06, 2026ರಂದು ಕಡಬ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರಾಕೃತಿಕ ವಿಕೋಪ ಹಾನಿಗಳ ಕುರಿತು ಸ್ಥಳ ತನಿಖೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಬೆಳಿಗ್ಗೆ 11.00 ಗಂಟೆಗೆ ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆ ನಡೆಸಲಿದ್ದಾರೆ.

kadaba times
uniq

ಕಡಬ:ಕಡಬ ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿಗಳ ಕುರಿತು ಖುದ್ದು ಪರಿಶೀಲಿಸಲು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆಗಸ್ಟ್ 6ರಂದು ಕಡಬ ತಾಲೂಕಿಗೆ ಭೇಟಿ ನೀಡಲಿದ್ದಾರೆ.

​ಈ ಕುರಿತು ಕಡಬ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

 ಅಧಿಕಾರಿಗಳ ಸಭೆ:

​ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರ ನಿರ್ದೇಶನದಂತೆ, ಉಸ್ತುವಾರಿ ಸಚಿವರು ಆಗಸ್ಟ್ 06, 2026ರಂದು ಪೂರ್ವಾಹ್ನ 10:00 ಗಂಟೆಯಿಂದ ಕಡಬ ತಾಲೂಕಿನ ವಿವಿಧ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ತನಿಖೆ ಹಾಗೂ ಹಾನಿಯ ಪರಿಶೀಲನೆ ನಡೆಸಲಿದ್ದಾರೆ.

kadaba times
kadaba times

​ತದನಂತರ, ಪೂರ್ವಾಹ್ನ 11:00 ಗಂಟೆಗೆ ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಕೃತಿ ವಿಕೋಪ ಪರಿಹಾರ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ.

​ಈ ಸಭೆಗೆ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಹಾಗೂ ವಾರ್ತಾ ಮತ್ತು ಪ್ರಸಾರ ಮಾಧ್ಯಮದ ಪತ್ರಕರ್ತರು ಉಪಸ್ಥಿತರಿರುವಂತೆ ಕಡಬ ತಹಶೀಲ್ದಾರರು ಪ್ರಕಟಣೆಯಲ್ಲಿ ಕೋರಿದ್ದಾರೆ.

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles