
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕಡಬ ಘಟಕದ ಆಶ್ರಯದಲ್ಲಿ, ಬಿಲ್ಲವ ಸಂಘ ಕಡಬ ತಾಲೂಕು ಹಾಗೂ ಬಿಲ್ಲವ ಮಹಿಳಾ ವೇದಿಕೆಯ ಸಹಕಾರದೊಂದಿಗೆ 5ನೇ ವರ್ಷದ ಕೆಸರ್ ಕಂಡೊಂಡು ಬಿರುವೆರ್ನ ಗೊಬ್ಬುಲು” (ಕೆಸರುಗದ್ದೆ ಆಟೋಟಿ ಸ್ಪರ್ಧೆ) ಕಾರ್ಯಕ್ರಮವು ಆಗಸ್ಟ್ 9, 2026ರ ರವಿವಾರ ಆಲಂಕಾರಿನ ಪೆರಾಜೆ ಶ್ರೀ ರಕ್ತೇಶ್ವರಿ ದೈವಸ್ಥಾನ ಮಾಯಿಲ್ಲ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವವಾಹಿನಿ (ರಿ.) ಕಡಬ ಘಟಕದ ಆಶ್ರಯದಲ್ಲಿ, ಬಿಲ್ಲವ ಸಂಘ ಕಡಬ ತಾಲೂಕು ಹಾಗೂ ಬಿಲ್ಲವ ಮಹಿಳಾ ವೇದಿಕೆಯ ಸಹಕಾರದೊಂದಿಗೆ 5ನೇ ವರ್ಷದ ” ಕೆಸರ್ ಕಂಡೊಡು ಬಿರುವೆರ್ನ ಗೊಬ್ಬಲು “ ಸಂಭ್ರಮದ ಕೆಸರುಗದ್ದೆ ಆಟೋಟಿ ಸ್ಪರ್ಧೆಗಳು ಆಗಸ್ಟ್ 9 ರಂದು ನಡೆಯಲಿವೆ.
ಆಲಂಕಾರು ಗ್ರಾಮದ ಪೆರಾಜೆ ಶ್ರೀ ರಕ್ತೇಶ್ವರಿ ದೈವಸ್ಥಾನ ಮಾಯಿಲ್ಲ ಮುಂಭಾಗದ ಗದ್ದೆಯಲ್ಲಿ ದಿನಪೂರ್ತಿ ವೈವಿಧ್ಯಮಯ ಸಾಂಪ್ರದಾಯಿಕ ಕ್ರೀಡಾಕೂಟ ನೆರವೇರಲಿದೆ.


ಸ್ಥಳದಾನಿಗಳಾದ ಶ್ರೀಮತಿ ಮೋಹಿನಿ ರುಕ್ಮಯ್ಯ ಪೂಜಾರಿ ಮಾಯಿಲ್ಲ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕ್ಷಯ ಕಾಲೇಜು ಪುತ್ತೂರು ಇದರ ಜೇರ್ಮ್ಯಾನ್ ಜಯಂತ್ ನಡುಬೈಲು, ಕಡಬ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆ. ಐತ್ತೂರು, ಕಡಬ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಜಯಂತಿ ನಂದೋಳಿ, ಉದ್ಯಮಿ ಅಭಿನಾಷ್ ಪಿ.ಕೆ., ಶ್ರೀ ಕಾಮಧೇನು ಮಹಿಳಾ ಸಹಕಾರಿ ಸಂಘ ನೆಲ್ಯಾಡಿ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಹಾಗೂ ಕಡಬ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಕುಸುಮ ಪಿ. ವೈ. ಉಪಸ್ಥಿತರಿರಲಿದ್ದಾರೆ.
