ಪುತ್ತೂರು ಬಿಜೆಪಿಯಲ್ಲಿ ಹೊಯ್ ಕೈ ನಡೆದಿತ್ತಾ?

kadaba times

ಪುತ್ತೂರಿನಲ್ಲಿ ನಡೆದ ತಿರಂಗಾ ಯಾತ್ರೆಯ ಯಶಸ್ಸನ್ನು ಸಹಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರ ನಡುವೆ ಗಲಾಟೆ ನಡೆದಿದೆ ಎಂದು ಹರಡಿಸಲಾಗುತ್ತಿರುವ   ಪೋಸ್ಟರ್‌ಗಳಿಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ  ಮತ್ತು  ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್   ಅವರು ತಿರಂಗಾ ಯಾತ್ರೆಯ ಸಿದ್ಧತೆಯ ಸ್ಥಳದಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದ್ದಾರೆ

kadaba times
uniq

ಪುತ್ತೂರು: ಪುತ್ತೂರಿನಲ್ಲಿ ಜರುಗಿದ   ತಿರಂಗಾ ಯಾತ್ರೆಯ ಯಶಸ್ಸನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಇಲ್ಲಸಲ್ಲದ ಊಹಾಪೋಹಗಳನ್ನು ಹರಡುತ್ತಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ವಿಧಾನಪರಿಷತ್ ಸದಸ್ಯ (MLC) ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ “ಪುತ್ತೂರು ಬಿಜೆಪಿಯಲ್ಲಿ ಹೊಯ್ ಕೈ: ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರ ನಡುವೆ ನಿನ್ನೆ ರಾತ್ರಿ ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ ಗಲಾಟೆ” ಎಂಬ ಪೋಸ್ಟರ್ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ, ತಿರಂಗಾ ಯಾತ್ರೆಯ ಸಿದ್ಧತೆಯ ಸ್ಥಳದಲ್ಲಿ ಅವರು ಮಾಧ್ಯಮಗಳ ಮುಂದೆ  ಸ್ಪಷ್ಟನೆ ನೀಡಿದ್ದಾರೆ.

ಇದು ರಾಷ್ಟ್ರಭಕ್ತಿಯ ಕಾರ್ಯಕ್ರಮ: ಮಾಧ್ಯಮಗಳೊಂದಿಗೆ ಮಾತನಾಡಿದ ದಯಾನಂದ ಶೆಟ್ಟಿ ಉಜಿರೆಮಾರು ಅವರು, “ತಿರಂಗಾ ಯಾತ್ರೆಯು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಸ್ವಂತ ಕಾರ್ಯಕ್ರಮವಲ್ಲ. ಇದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಹಾಗೂ ದೇಶಪ್ರೇಮ ಸಾರುವ ರಾಷ್ಟ್ರಭಕ್ತಿಯ ಸದ್ಭಾವನಾ ಕಾರ್ಯಕ್ರಮ. ಇಂತಹ ಪವಿತ್ರ ಕಾರ್ಯಕ್ರಮವನ್ನು ಬೇರೆ ಯಾವುದೇ ದೃಷ್ಟಿಯಿಂದ ನೋಡುವ ಅಗತ್ಯವೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ಇಲ್ಲದ ವಿಚಾರಗಳನ್ನು ಸೃಷ್ಟಿಸಿ ಹಬ್ಬಿಸುತ್ತಿರಬಹುದು, ಆದರೆ ಸಾರ್ವಜನಿಕರು ಸತ್ಯಾಸತ್ಯತೆಯನ್ನು ಅರಿತುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ” ಎಂದು ಹೇಳಿದರು.

kadaba times
kadaba times

ಬಾಲ್ಯದ ಸ್ನೇಹಿತರು:  ತಮ್ಮ ಮತ್ತು ಎಂಎಲ್‌ಸಿ ಕಿಶೋರ್ ಕುಮಾರ್ ಅವರ ಸಂಬಂಧದ ಕುರಿತು ಮಾತನಾಡಿದ ದಯಾನಂದ ಶೆಟ್ಟಿ, “ನಾನು ಮತ್ತು ಕಿಶೋರ್ ಅಣ್ಣ ಬಾಲ್ಯದಿಂದಲೂ ಒಟ್ಟಿಗೆ ಬೆಳೆದು, ಪಕ್ಷ ಹಾಗೂ ಸಂಘಟನೆಯಲ್ಲಿ ಜೊತೆಯಾಗಿ ಕೆಲಸ ಮಾಡಿದವರು. ನಮ್ಮ ನಡುವೆ ಚರ್ಚೆಗಳು, ಕೆಲವೊಮ್ಮೆ ವೈಚಾರಿಕ್ಕವಾಗಿ ಭಿನ್ನಾಭಿಪ್ರಾಯಗಳು ನಡೆದಿರಬಹುದು. ಆದರೆ ಅದನ್ನು ಇಂದಿನ ತಿರಂಗಾ ಯಾತ್ರೆಗಾಗಲಿ ಅಥವಾ ಇತರ ಯಾವುದೇ ವಿಚಾರಕ್ಕೆ ಸಂಬಂಧಿಸಿ ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಸಂಪೂರ್ಣವಾಗಿ ನಡೆಯದೇ ಇರುವ ಘಟನೆಯನ್ನು ನಡೆದಂತೆ ಬಿಂಬಿಸುವ ಕುತಂತ್ರ ನಡೆಯುತ್ತಿದ್ದು, ಇದನ್ನು ಜನರು ನಂಬಬಾರದು” ಎಂದು ಸ್ಪಷ್ಟಪಡಿಸಿದರು.

“ಪುತ್ತೂರಿನ ಸಾರ್ವಜನಿಕರು ಸತ್ಯವೇನು, ಸುಳ್ಳೇನು ಎಂಬುದನ್ನು ಗುರುತಿಸುವಷ್ಟು ಪ್ರಜ್ಞಾವಂತರಾಗಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಯಾರೂ ಮಹತ್ವ ನೀಡದೆ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನೇ ಎತ್ತಿಹಿಡಿಯಬೇಕು” ಎಂದು ಅವರು ಮನವಿ ಮಾಡಿದರು.

Related Articles

Latest Articles