ಬರ್ತ್ ಡೇ ವಿಶ್ ಲೇಟಾಯ್ತು, ಕಾರಿನ ಕೀ ಚರಂಡಿ ಪಾಲಾಯ್ತು!

kadaba times

ಕಡಬದ ಸಂತೆಕಟ್ಟೆ ಸಮೀಪ ಯುವಕ-ಯುವತಿಯ ನಡುವೆ ನಡೆದ ಸಣ್ಣ ವಾಗ್ವಾದದ ಪರಿಣಾಮ ಕಾರಿನ ಕೀ ಚರಂಡಿ ಪಾಲಾದ ಸ್ವಾರಸ್ಯಕರ ಘಟನೆ ನಡೆದಿದೆ. ಜುಲೈ 24ರಂದು ನಡೆದ ಈ ಘಟನೆಯಲ್ಲಿ ಚರಂಡ ಬಿದ್ದ ಕೀ ಹುಡುಕಲು ಸಾರ್ವಜನಿಕರು ಹಾಗೂ ಯುವಕ ಪಟ್ಟ ಶ್ರಮ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

kadaba times
uniq

​ಕಡಬ: ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ಕಾರಿನ ಕೀ ಚರಂಡಿ ಸೇರುವಂತೆ ಮಾಡಿದ್ದು, ಬಳಿಕ ಕೀ ಹುಡುಕಲು ಯುವಕ ಫಜೀತಿಗೆ ಒಳಗಾದ ಸ್ವಾರಸ್ಯಕರ ಘಟನೆ ಕಡಬದ ಸಂತೆಕಟ್ಟೆ ಬಳಿ ಜುಲೈ 24ರಂದು ನಡೆದಿದೆ.ಕೀ ಸಿಗದ ಕಾರಣ ಹುಡುಕಾಟವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.

Kadaba Sante Katte people gathering near drain searching for car key after couples fight
ಕಡಬದ ಸಂತೆಕಟ್ಟೆ ಬಳಿ ಚರಂಡಿಗೆ ಬಿದ್ದ ಕಾರಿನ ಕೀ ಹುಡುಕಲು ನೆರೆದಿದ್ದ ಸಾರ್ವಜನಿಕರು.

​ಸ್ಥಳೀಯರ ಮಾಹಿತಿಯ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೋರ್ವ ಕಡಬದ ತನ್ನ ಪ್ರೇಯಸಿ ಎನ್ನಲಾದ ಯುವತಿಯ ಜನ್ಮದಿನದ ಅಂಗವಾಗಿ ಶುಭಾಶಯ ಕೋರಲು ಬಾಡಿಗೆ ಕಾರಿನಲ್ಲಿ ಆಗಮಿಸಿದ್ದ ಎನ್ನಲಾಗಿದೆ. ಕಡಬ ಸಂತೆಕಟ್ಟೆ ಬಳಿ ಇಬ್ಬರೂ ಭೇಟಿಯಾದಾಗ, ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಣ್ಣ ವಾಗ್ವಾದ ನಡೆದಿದೆ ಎನ್ನಲಾಗಿದೆ.

​ಮಾತಿಗೆ ಮಾತು ಬೆಳೆದು ಕೋಪಗೊಂಡ ಯುವತಿ, ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದು ಪಕ್ಕದಲ್ಲೇ ಇದ್ದ ಚರಂಡಿಗೆ ಎಸೆದಿದ್ದಾರೆ ಎನ್ನಲಾಗಿದೆ. ಕೀ  ಚರಂಡಿಯ ಕೊಳಚೆ ನೀರು ಮತ್ತು ಹೂಳಿನೊಳಗೆ ಬಿದ್ದು ಕಾಣೆಯಾಗಿದೆ. ​ಕೀ ಇಲ್ಲದೆ ಕಾರು ತೆಗೆಯಲಾಗದೆ ಫಜೀತಿಗೆ ಸಿಲುಕಿದ ಯುವಕ, ಸ್ಥಳೀಯರ ನೆರವಿನೊಂದಿಗೆ ಕೀ ಹುಡುಕಲು ಸುದೀರ್ಘ ಪ್ರಯತ್ನ ನಡೆಸಿದ್ದಾನೆ.ಚರಂಡಿ ಸುತ್ತಮುತ್ತಲಿನ ಗಿಡಗಂಟಿಗಳನ್ನು  ಕತ್ತರಿಸಿ ತೆಗೆಯಲಾಗಿದೆ.

kadaba times
kadaba times
Kadaba Sante Katte people gathering near drain searching for car key after couples fight
ಕಡಬದ ಸಂತೆಕಟ್ಟೆ ಬಳಿ ಚರಂಡಿಗೆ ಬಿದ್ದ ಕಾರಿನ ಕೀ ಹುಡುಕಲು ನೆರೆದಿದ್ದ ಸಾರ್ವಜನಿಕರು

​ಕೀ ಹುಡುಕಲು ಜನವೋ ಜನ! ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್:

​ಸಂತೆಕಟ್ಟೆಯಂತಹ ಜನನಿಬಿಡ ಪ್ರದೇಶದಲ್ಲಿ ಚರಂಡಿಯೊಳಗೆ ಕೀ ಹುಡುಕುತ್ತಿರುವ ದೃಶ್ಯವನ್ನು ಕಂಡ ಸಾರ್ವಜನಿಕರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರಂಡಿ ಸುತ್ತಮುತ್ತ  ಕೀ ಹುಡುಕಿದರೂ ತಕ್ಷಣಕ್ಕೆ ಸಿಗದೆ ಯುವಕ ಪರದಾಡುವಂತಾಯಿತು.

​ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ನೆರೆದು ನೋಡುತ್ತಿದ್ದ ಈ ಸ್ವಾರಸ್ಯಕರ ಘಟನೆಯ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related Articles

Latest Articles