ನಾಳೆಯಿಂದ (ಸೆ.18 ರಿಂದ ಸೆ.24 ರ ವರೆಗೆ )ವಳಕಡಮದಲ್ಲಿ ಕಡಬ ಪ.ಪೂ ಕಾಲೇಜಿನ NSS ವಾರ್ಷಿಕ ಶಿಬಿರ

kadaba times

ಕಡಬ:  ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆ ಘಟಕದ ಈ ಸಾಲಿನ ವಾರ್ಷಿಕ  ಶಿಬಿರವು ಸೆ.18 ರಿಂದ ಸೆ.24 ರ ವರೆಗೆ  ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ವಳಕಡಮದಲ್ಲಿ ನಡೆಯಲಿದೆ.

kadaba times
uniq

ಸುಳ್ಯ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಈ ಶಿಬಿರ ಉದ್ಘಾಟಿಸಲಿದ್ದು ಹಲವು ಗಣ್ಯರು ಜೊತೆಯಾಗಲಿದ್ದಾರೆ. ಶ್ರಮದಾನ, ಶೈಕ್ಷಣಿಕ ಉಪನ್ಯಾಸ, ಮಾಹಿತಿ ಶಿಬಿರ, ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮ ಜರುಗಲಿದೆ.

ಈ ವಿಶೇಷ ಶಿಬಿರದ ಮೂಲಕ ಶಾಲಾ ಕೈತೋಟ   ಮತ್ತು ಗೇರು ತೋಟದ ನಿರ್ವಹಣೆ ,  ಆಟದ ಮೈದಾನದ ವಿಸ್ತರಣೆ ಮತ್ತು ಸಂಪರ್ಕ ರಸ್ತೆ ರಿಪೇರಿ, ಶಾಲಾ ವಠಾರದ ಶುಚಿತ್ವ ಹಾಗೂ ಪರಿಸರದ ಸಂರಕ್ಷಣೆ,  ಉದ್ಯೋಗ ಮಾಹಿತಿ ಶಿಬಿರಗಳು, ಗ್ರಾಮ ಸಂದರ್ಶನ, ವ್ಯಕ್ತಿತ್ವ ವಿಕಸನ, ನಾಯಕತ್ವ ಹಾಗೂ ಶೈಕ್ಷಣಿಕ ವಿಚಾರಗಳ  ಬಗ್ಗೆ ಉಪನ್ಯಾಸ ಮತ್ತು ತರಬೇತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿವೆ.

kadaba times
kadaba times

ಗ್ರಾಮದ ಜನರು, ಶಾಲಾಭಿಮಾನಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲ ಹಾಗೂ ಶಿಬಿರದ ನಿರ್ದೇಶಕ ಡಿ ದೇವರಾಜು,  ಸಹಾಯಕ ಶಿಬಿರ ನಿರ್ದೇಶಕ ವಾಸುದೇವ ಗೌಡ ಕೋಲ್ಪೆ ತಿಳಿಸಿದ್ದಾರೆ.

ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ., ಸಹಾಯಕ ಕಾರ್ಯಕ್ರಮಾಧಿಕಾರಿ ಶ್ರೀಮತಿ ಲಾವಣ್ಯ ಹೇಮಂತ್,  ನವೀನ್ ಎಸ್.ಎಸ್,  ಶಿಬಿರಾಧಿಕಾರಿಗಳು ಕಬೀರ್ ಟಿ.,  ಕುಮಾರಿ ಮಲ್ಲಿಕಾ,  ಕುಮಾರಿ ಶ್ರುತಿ ,ಘಟಕದ  ನಾಯಕರು  ಅರ್ಪಿತ್ (, ದ್ವಿತೀಯ ಪಿ.ಯು.ಸಿ.) ಕು| ದೀಪಿಕಾ (, ದ್ವಿತೀಯ ಪಿ.ಯು.ಸಿ.) ವಿದ್ಯಾರ್ಥಿ ನಾಯಕ  ಜೋಶ್ವ,( ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗ) ಶಿಬಿರದ ವೈದ್ಯಾಧಿಕಾರಿಗಳು   ಡಾ| ಮಂಜುನಾಥ ಸಿ., (ಪ್ರಭಾರ ವೈದ್ಯಾಧಿಕಾರಿಗಳು,  ಸಮುದಾಯ ಆರೋಗ್ಯ ಕೇಂದ್ರ, ಕಡಬ) ಶಿಬಿರ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ.

Related Articles

Latest Articles