ಕಡಬ ಪಟ್ಟಣ ಪಂಚಾಯತ್ ಕಚೇರಿ ಖಾಲಿ ಖಾಲಿ!

ಪ.ಪಂ ಮುಖ್ಯಾಧಿಕಾರಿ ಹೇಳಿದ್ದೇನು?

kadaba times

ಕಡಬ: ನೂತನ ಕಡಬ ಪಟ್ಟಣ ಪಂಚಾಯತ್ ಗೆ ಅಧಿಕಾರಿಗಳ ಆಡಳಿತ ಕೊನೆಗೊಂಡು ಚುನಾವಣೆ ನಡೆದು ಕೆಲ ದಿನಗಳು ಕಳೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದು ಹೊಸ ಆಡಳಿತ ಮಂಡಳಿ ಬಂದಿದೆ.

kadaba times
uniq

ಇದರ ಮುಂದುವರಿದ ಭಾಗವಾಗಿ  ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ  ಸೆ.17 ರಂದು  ನೂತನ  ಮಂಡಳಿ ತುರ್ತು ಸಭೆ ಆಯೋಜಿಸಿದ್ದ ಕಾರಣ   ಈ ಕಾರ್ಯಕ್ರಮಕ್ಕೆ  ಎಲ್ಲಾ ಸಿಬ್ಬಂದಿಗಳು  ತೆರಳಿದ್ದರು.ಇದರಿಂದಾಗಿ ಕಚೇರಿ ಖಾಲಿ ಖಾಲಿ ಆಗಿತ್ತು .

ಪ.ಪಂ ಕಚೇರಿಯಲ್ಲಿ ಯಾವುದೇ ಸಿಬ್ಬಂದಿಗಳು ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು. ಕೆಲವರು ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚಿಸಿದ್ದರು.  ಯಾವುದೇ ಕಾರ್ಯಕ್ರಮವಿದ್ದರೂ  ಕಚೇರಿಯಲ್ಲಿ  ಕನಿಷ್ಠ  ಓರ್ವ ಸಿಬ್ಬಂದಿ  ಇರುವಂತೆ  ನೋಡಿಕೊಳ್ಳಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಿಬ್ಬಂದಿಗಳು ಇಲ್ಲದಿರುವ ಬಗ್ಗೆ  ಮಾಹಿತಿ ತಿಳಿದ ಮಾಧ್ಯಮ ಪ್ರತಿನಿಯೊಬ್ಬರು   ಭೇಟಿ ನೀಡಿದಾಗ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು,   ಅರ್ಜಿ ನೀಡಲು ಬಂದಿದ್ದ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿರುವಾಗಲೇ ಅಲ್ಲಿಗೆ ಬಂದ ಹಿರಿಯ ಸಿಬ್ಬಂದಿ ಗ್ರಾಮಸ್ಥರನ್ನು ಸ್ವಲ್ಪ ಹೊತ್ತು ಕಾಯಿರಿ  ಎಂದು ಹೇಳಿ ಇಬ್ಬರು ಸಿಬ್ಬಂದಿಯನ್ನು ತರಾತುರಿಯಲ್ಲಿ ಕರೆದುಕೊಂಡು ಹೋಗಿದ ಪ್ರಸಂಗವೂ ನಡೆಯಿತು ಎಂದು ತಿಳಿದು ಬಂದಿದೆ.

kadaba times
kadaba times

ಈ ವಿದ್ಯಮಾನದ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಲೀಲಾವತಿಯವರು ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿ, ನಮ್ಮ ಪ.ಪಂ ಸಂಭಾಗಣದಲ್ಲಿ ನೂತನ ಅಧ್ಯಕ್ಷರೊಂದಿಗೆ ತುರ್ತು ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಇದರಿಂದಾಗಿ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ಮೊನ್ನೆ ಮಾನ್ಯ ತಹಶೀಲ್ದಾರರು ಅಧಿಕಾರ ಹಸ್ತಾಂತರಿಸಿ ಹೋದ ಮೇಲೆ ಜೊತೆಯಾಗಿ ಸೇರಲು ಸಾಧ್ಯವಾಗಿರಲಿಲ್ಲ.  ಸಾರ್ವಜನಿಕರು ಕಚೇರಿಯ ಹೊರ ಭಾಗದಲ್ಲಿದ್ದರೂ ಯಾರು ತುರ್ತು ಕೆಲಸಗಳಿಗೆ ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಸಭೆ ಮುಗಿದ ಕೂಡಲೇ ಎಲ್ಲರೂ ಕಚೇರಿಗೆ ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ.

 

Related Articles

Latest Articles