Lucky Dip Draw Results-ಕಡಬ ಬೆಡಿ ಲಕ್ಕಿ ಡಿಪ್ ಫಲಿತಾಂಶ ಪ್ರಕಟ: ವಿಜೇತರ ಪಟ್ಟಿ ಇಲ್ಲಿದೆ ನೋಡಿ

kadaba times

ಕಡಬ ಬೆಡಿಯ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಕಿ ಡಿಪ್ ಡ್ರಾ ಫಲಿತಾಂಶ ಪ್ರಕಟವಾಗಿದೆ. ಮಮತಾ, ಗಂಗಾಧರ ಸೇರಿದಂತೆ ಒಟ್ಟು 8 ಮಂದಿ ಅದೃಷ್ಟಶಾಲಿಗಳ ವಿವರ ಇಲ್ಲಿದೆ.

kadaba times
uniq

ಕಡಬ:  ಅತ್ಯಂತ ಸಡಗರದಿಂದ ಜರುಗಿದ ಏಕಾಹ ಭಜನೆ ಹಿನ್ನೆಲೆಯಲ್ಲಿ  ‘ಕಡಬ ಬೆಡಿ’ಯ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಲಕ್ಕಿ ಡಿಪ್ ಸ್ಪರ್ಧೆಯ ಅದೃಷ್ಟಶಾಲಿ ವಿಜೇತರ ಆಯ್ಕೆಯು ಇತ್ತೀಚೆಗೆ ನಡೆಯಿತು.

ವಿಜೇತರ ವಿವರ: ಲಕ್ಕಿ ಡಿಪ್‌ನ ಪ್ರಥಮ ಬಹುಮಾನವನ್ನು ಮಮತಾ (ಟಿಕೆಟ್ ಸಂಖ್ಯೆ: 1775) ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಗಂಗಾಧರ (ಟಿಕೆಟ್ ಸಂಖ್ಯೆ: 5779) ಹಾಗೂ ತೃತೀಯ ಬಹುಮಾನವನ್ನು ಜಯರಾಮ್ (ಟಿಕೆಟ್ ಸಂಖ್ಯೆ: 3910) ತಮ್ಮದಾಗಿಸಿಕೊಂಡಿದ್ದಾರೆ.

kadaba times
kadaba times

ಆಕರ್ಷಕ ಬಹುಮಾನಗಳು: ಇವುಗಳ ಜೊತೆಗೆ ಕಿರಣ್ (4801), ಜಾಫರ್ (2666), ಬೇಬಿ ಬಸವಪಾಲು (1043), ಟೋಮ್ ಬಜಾರ್ (3580) ಹಾಗೂ ರಾಜಕೃಷ್ಣ (3961) ಆಕರ್ಷಕ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡ್ರಾದಲ್ಲಿ ವಿಜೇತರಾದವರು ತಮ್ಮ ಅಧಿಕೃತ ಟಿಕೆಟ್ ಮತ್ತು ಗುರುತಿನ ಚೀಟಿಯೊಂದಿಗೆ ಒಂದು ತಿಂಗಳ ಒಳಗಾಗಿ ಸಮಿತಿಯನ್ನು ಸಂಪರ್ಕಿಸಿ ಬಹುಮಾನಗಳನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.  65ನೇ ಏಕಹ ಭಜನಾ ಮಹೋತ್ಸವದ ಅಂಗವಾಗಿ ನಡೆದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸರ್ವ ಭಕ್ತಾದಿಗಳಿಗೆ ಸಮಿತಿಯು ಕೃತಜ್ಞತೆಗಳನ್ನು ಅರ್ಪಿಸಿದೆ.

Related Articles

Latest Articles