ಕಡಬ: ಮಹಿಳೆ ಮೇಲೆ ಕಲ್ಲೆಸೆದು ಹಲ್ಲೆ, ಜಾತಿ ನಿಂದನೆ ಆರೋಪ; ನಾಲ್ವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

kadaba times

ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ದೂರು ದಾಖಲಾಗಿದ್ದು, ಕಡಬ ಪೊಲೀಸರು ತನಿಖೆ ಆರಂಭಿಸಿದ್ದಾರೆ.

kadaba times
uniq

ಕಡಬ: ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿ ನಿಂದನೆ ಮಾಡಿ, ಕಲ್ಲಿನಿಂದ ಎಸೆದು ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ದೂರುದಾರೆ ಮಹಿಳೆಯು  ಕಳೆದ 15 ವರ್ಷಗಳಿಂದ ಬಲ್ಯ ಗ್ರಾಮದ  ಮನೆಯೊಂದರಲ್ಲಿ  ಕೂಲಿ ಕೆಲಸ ಮಾಡುತ್ತಿದ್ದಾರೆ. ಎಪ್ರಿಲ್ 8 ರಂದು ಮನೆಯ ಮಾಲೀಕರು ಕಾರ್ಯಕ್ರಮ ನಿಮಿತ್ತ ಹೊರಗಡೆ ಹೋಗಿದ್ದಾಗ,  ಮನೆಯ ಕಾವಲಿಗಿದ್ದು ತೋಟದ ಕೆಲಸ ಮಾಡುತ್ತಿದ್ದರು.  ಮಧ್ಯಾಹ್ನದ ವೇಳೆ ಮನೆಯ ರಸ್ತೆಯಲ್ಲಿ ಜೆಸಿಬಿ (JCB) ಯಂತ್ರದ ಮೂಲಕ ಹೊಂಡ ತೆಗೆಯುತ್ತಿರುವುದನ್ನು ಗಮನಿಸಿ ಮಾಲೀಕರು ಬಂದ ಮೇಲೆ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿತರಾದ ರುಕ್ಷ್ಮಯ್ಯ, ನೊಣಯ್ಯ, ಬಾಲಕೃಷ್ಣ ಮತ್ತು ಹರಿಪ್ರಸಾದ್ ಎಂಬುವವರು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅವರ ಜಾತಿಯನ್ನು ಹಿಡಿದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  ಮುಂದುವರಿದು, ಆರೋಪಿತರೆಲ್ಲರೂ ಸೇರಿ ದೂರುದಾರರ ಮೇಲೆ ಕಲ್ಲು ಎಸೆದಿದ್ದು, ಇದರಿಂದ ಅವರ ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ಅಲ್ಲದೆ, ಅಲ್ಲಿಂದ ತೆರಳದಿದ್ದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾರೆ

kadaba times
kadaba times

ಘಟನೆಯ ನಂತರ ಗಾಯಗೊಂಡ ಮಹಿಳೆಯನ್ನು ಅವರ ಪತಿ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಆರೋಪಿತರ ವಿರುದ್ಧ  ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015: ಸೆಕ್ಷನ್ 3(1)(s), 3(1)(r), 3(2)(va). ಭಾರತೀಯ ನ್ಯಾಯ ಸಂಹಿತೆ (BNS) 2023: ಸೆಕ್ಷನ್ 118(1) (ಗಾಯಗೊಳಿಸುವುದು), 352 (ಅವಮಾನ), 351(2) (ಕ್ರಿಮಿನಲ್ ಬೆದರಿಕೆ)  ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಉಪ್ಪಿನಂಗಡಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಡಬ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ

Related Articles

Latest Articles