ಜನಾಕ್ರೋಶದ ಬಳಿಕ ಕಡಬ-ಪಂಜ ರಸ್ತೆಯ ದುರಸ್ತಿಗೆ ಮುಂದಾದ ಗುತ್ತಿಗೆದಾರರು

kadaba times

ಕಡಬ: ವಾಹನ ಸವಾರರು ಮತ್ತು ಸಾರ್ವಜನಿಕರ ಭಾರೀ ಆಕ್ರೋಶದ ಬಳಿಕ ಗುಂಡಿಗಳಿಂದ ತುಂಬಿ ರುವ  ಸಂಪೂರ್ಣ ನಾದುರಸ್ತಿ ಸ್ಥಿತಿಯಲ್ಲಿರುವ  ಕಡಬ-ಪಂಜ ಮುಖ್ಯರಸ್ತೆ ದುರಸ್ತಿಗೆ ಗುತ್ತಿಗೆದಾರರು ಮುಂದಾಗಿದ್ದಾರೆ.

kadaba times
uniq

ಶಾಸಕಿಯವರ ಕೋರಿಕೆಯಂತೆ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ಮಂಜೂರುಗೊಳಿಸಿತ್ತು  ಈ ಕಾರಮಗಾರಿಗೆ ಮಳೆ ಕಡಿಮೆಯಾಗಿರುವ ಕಾರಣ ರಸ್ತೆ ಹೆಚ್ಚು ಹಾಳಾಗಿರುವ ಸರ್ಕಾರಿ ಆಸ್ಪತ್ರೆ, ಮಾಲೇಶ್ವರ ರಸ್ತೆ ಸಮೀಪ ಮತ್ತು ಪೆಟ್ರೋಲ್ ಪಂಪ್ ಹೀಗೆ ಮೂರು  ಕಡೆಗಳಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ  .

ರಸ್ತೆಯನ್ನು ಅಭಿವೃದ್ಧಿಗೊಳಿಸಲು 5 ತಿಂಗಳ ಹಿಂದೆ ಗುದ್ದಲಿಪೂಜೆ ನೆರವೇರಿಸಿದ್ದರೂ  ಮಳೆಯ ಕಾರಣ ನೆಪದಲ್ಲಿ  ಕಾಮಗಾರಿ  ಮುಂದೂಡಲಾಗಿತ್ತು. ಗುದ್ದಲಿ ಪೂಜೆ ನಡೆಯುವ ಮೊದಲು ರಸ್ತೆಗೆ ತೇಪೆ ಹಾಕುವ ಕಾಮಗಾರಿಗೆ ಮುಂದಾದಾಗ ರಸ್ತೆಯನ್ನು ಪೂರ್ತಿಯಾಗಿ ಅಭಿವೃದ್ಧಿಪಡಿಸುವಂತೆ ಸ್ಥಳೀಯ ವಾಹನ ಚಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿ ತೇಪೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ತೇಪೆ ಕಾರ್ಯಯೂ ನಡೆದಿರಲಿಲ್ಲ.

ಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವೆನಿಸಿದಾಗ ಶಾಸಕರ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯಿಂದ ಜಲ್ಲಿ ಹಾಗೂ ಜಲ್ಲಿ ಹುಡಿ ಮಿಶ್ರಣ ಮಾಡಿ ರಸ್ತೆಯ ಗುಂಡಿ ಮುಚ್ಚುವ ಕೆಲಸ ನಡೆಸಿದರೂ ಅದು ಪ್ರಯೋಜನಕ್ಕೆ ಬಂದಿಲ್ಲ.  ಜಲ್ಲಿ ಹುಡಿ ಮಳೆಯ ನೀರಿನಲ್ಲಿ ತೊಳೆದುಹೋಗಿ ಗುಂಡಿಗಳಲ್ಲಿ ಜಲ್ಲಿ ಮಾತ್ರ ಉಳಿದ ಕಾರಣ ದ್ವಿಚಕ್ರವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಗಿತ್ತು.

kadaba times
kadaba times

ಕ್ರೆಡಿಟ್ ಪಡೆಯಲು ಮುಂದಾದ ಬೆಂಬಲಿಗರು:  ರಸ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದರೂ ಯಾವುದೇ ರಾಜಕೀಯ  ಮುಖಂಡರು,ಪಕ್ಷದ ಬೆಂಬಲಿಗರು  ಅವ್ಯವಸ್ಥೆಯ ವಿರುದ್ದ ಧ್ವನಿ ಎತ್ತಲೇ ಇಲ್ಲ. ಆದರೆ ಕಾಮಗಾರಿ ನಡೆಸಲು ಜೆಸಿಬಿ ಸಮತಟ್ಟು ಮಾಡಲು  ಬರುತ್ತಿದ್ದಂತೆಯೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸ್ಥಳೀಯ ಕೆಲವರು   ಸಿಜಿಬಿ ಮುಂದೆ ನಿಂತು ಪ್ರಚಾರದ ಸಲುವಾಗಿ ಪೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುಂಡಿ ಬಿದ್ದಾದ ರಸ್ತೆಯತ್ತ ಬಾರದವರು ಕಾಮಗಾರಿ ಆರಂಭವಾಗುತ್ತಿದ್ದಂತೆ ಅದರ ಕ್ರೆಡಿಟ್ ಪಡೆಯಲು ಮುಂದಾದರೆ ಎಂದು ಜನರು  ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಮಾಡಿದ್ದಾರೆ.

ಇನ್ನೊಂದು ಕೋಟಿ ರೂ  ಪ್ರಸ್ತಾವನೆ ಯಲ್ಲಿ:  ಇದೇ ಕಡಬ-ಪಂಜ ಮುಖ್ಯ ರಸ್ತೆಯ ಮುಂದುವರಿದ ಕಾಮಗಾರಿಗಾಗಿ ಮತ್ತೆ ಒಂದು ಕೋಟಿ ರೂ  ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಅಂದಾಜು ಪಟ್ಟಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನಷ್ಟೇ ಟೆಂಟರ್ ಇತ್ಯಾದಿ ಪ್ರಕ್ರಿಯೆಗಳು ಆಗಬೇಕಿದೆ.  ನಂತರವಷ್ಟೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

.

Related Articles

Latest Articles