ಕಡಬ ಪಟ್ಟಣ ಪಂಚಾಯತ್: ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್

ತಮನ್ನಾ ಜಬೀನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನೀಲಾವತಿ ಶಿವರಾಮ್ ಆಯ್ಕೆ

kadaba times

ಕಡಬ ಟೈಮ್ಸ್ (KADABA TIMES): ಇಲ್ಲಿನ ಪಟ್ಟಣ ಪಂಚಾಯತ್‌ನ 13 ಸ್ಥಾನಗಳಿಗೆ ಆ.ರಂದು ಚುನಾವಣೆ ನಡೆದಿದ್ದು  ಇದೀಗ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

kadaba times
uniq

ಸೆ.12ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರ ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಕಳಾರ ವಾರ್ಡಿನಲ್ಲಿ ಆಯ್ಕೆಯಾದ ತಮನ್ನಾ ಜಬೀನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಡಬ ವಾರ್ಡಿನಿಂದ ಆಯ್ಕೆಯಾದ ನೀಲಾವತಿ ಶಿವರಾಮ್ ಅವರು ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆಯು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕಡಬ ತಾಲೂಕು ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆಯಿತು. ಕಡಬ ಪಟ್ಟಣ ಪಂಚಾಯತ್ ಆದ ಬಳಿಕ ಪ್ರಥಮ ಚುನಾವಣೆ ನಡೆದಿದ್ದು, ಆಡಳಿತ ಮಂಡಳಿಯು ಪ್ರಥಮವಾಗಿ ಅಸ್ತಿತ್ವಕ್ಕೆ ಬರಲಿದೆ.

kadaba times
kadaba times

ಆ.20ರಂದು ಮತ ಎಣಿಕೆ ಕಾರ್ಯ ನಡೆದು ಸದಸ್ಯರ ಆಯ್ಕೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8 ಸ್ಥಾನ ಹಾಗೂ ಬಿಜೆಪಿಗೆ 5 ಸ್ಥಾನ ಲಭಿಸಿ, ಅಧಿಕಾರ ಕಾಂಗ್ರೆಸ್ ಪಕ್ಷ ಪಡೆದುಕೊಂಡಿತ್ತು.

Related Articles

Latest Articles