ಕೊಂಬಾರು ಗ್ರಾಮ: ಬೊಟ್ಟಡ್ಕದಲ್ಲಿ ಮಾ. 7 ಮತ್ತು 8ರಂದು ಮೊಗೇರ್ಕಳ ನೇಮೋತ್ಸವ

kadaba times

ಕಡಬ ತಾಲೂಕಿನ ಕುಂಬಾರು ಗ್ರಾಮದ ಬೊಟ್ಟಡ್ಕದಲ್ಲಿ ಮಾ. 7 ಮತ್ತು 8ರಂದು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ 25ನೇ ವರ್ಷದ  ನೇಮೋತ್ಸವ ಜರುಗಲಿದೆ.

kadaba times
uniq

ಕಡಬ: ಕುಂಬಾರು ಗ್ರಾಮದ ಬೊಟ್ಟಡ್ಕದಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವ ಸಮಿತಿ, ಶ್ರೀ ಬ್ರಹ್ಮ ಮೊಗೇರ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಶ್ರೀ ತನ್ಮಮಾನಿಗ ಮಹಿಳಾ ಮಂಡಲದ ಆಶ್ರಯದಲ್ಲಿ 25ನೇ ವರ್ಷದ   ನೇಮೋತ್ಸವ ಹಾಗೂ ಸಭಾ ಕಾರ್ಯಕ್ರಮವು ಮಾರ್ಚ್ 7 ಮತ್ತು 8ರಂದು ನಡೆಯಲಿದೆ.

ಕಾರ್ಯಕ್ರಮಗಳ ವಿವರ:

ದಿನಾಂಕ: 07-03-2026, ಶನಿವಾರ

  • ಬೆಳಿಗ್ಗೆ 9.00: ಸ್ಥಳ ಶುದ್ಧಿ.

  • ಸಂಜೆ 4.00: ಶ್ರೀ ಗುಳಿಗ ದೈವದ ನೇಮೋತ್ಸವ.

  • ಸಂಜೆ 7.30: ಶ್ರೀ ಮೊಗೇರ್ಕಳ ದೈವಗಳ ಭಂಡಾರ ಬರುವುದು.

  • ರಾತ್ರಿ 8.00: ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ.

  • ರಾತ್ರಿ 9.00: ಅನ್ನಸಂತರ್ಪಣೆ.

  • ರಾತ್ರಿ 10.00: ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು.

    kadaba times
    kadaba times
  • ರಾತ್ರಿ 12.00: ಶ್ರೀ ತನ್ಮಮಾನಿಗ ದೈವ ಗರಡಿ ಇಳಿಯುವುದು.

ದಿನಾಂಕ: 08-03-2026, ಭಾನುವಾರ

  • ಬೆಳಿಗ್ಗೆ 5.00: ಪ್ರಸಾದ ವಿತರಣೆ.

  • ಬೆಳಿಗ್ಗೆ 7.00: ಉಪಹಾರ.

  • ಬೆಳಿಗ್ಗೆ 8.00 ರಿಂದ: ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ.

  • ಮಧ್ಯಾಹ್ನ 12.00: ಪ್ರಸಾದ ವಿತರಣೆ ಮತ್ತು 12.30ಕ್ಕೆ ಅನ್ನಸಂತರ್ಪಣೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆಯ ಕೆ.ಪಿ.ಎಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ  ಜಿ. ಮಾಯಿಲಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂಬಾರು ಗ್ರಾ.ಪಂ. ಅಧ್ಯಕ್ಷ ಮಧುಸೂದನ್ ಒಡೋಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ ಮತ್ತು ಡಾ. ರಘು ಬೆಳ್ಳಪ್ಪಾಡಿ, ಮಂಗಳೂರಿನ ಎ.ಜೆ. ದಂತ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಮಧುಸೂದನ್ ಕೈಕರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೈವದ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಪ್ರಮುಖರು  ಪದಾಧಿಕಾರಿಗಳು ವಿನಂತಿಸಿದ್ದಾರೆ.

Related Articles

Latest Articles