Elephant Task Force:ಸುಳ್ಯ ಶಾಸಕಿಯ ಮನವಿಗೆ ಮುಖ್ಯಮಂತ್ರಿ ಸ್ಪಂದನೆ:’ಆನೆ ಕಾರ್ಯಪಡೆ’ ಗೆ ಗ್ರೀನ್ ಸಿಗ್ನಲ್

kadaba times

ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಕಾಡಾನೆ ಹಾವಳಿ ತಡೆಗೆ ‘ಆನೆ ಕಾರ್ಯಪಡೆ’ ರಚನೆಗೆ ಸರ್ಕಾರ ಅನುಮೋದನೆ ನೀಡಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ

kadaba times
uniq

ಸುಳ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಜನತೆಗೆ ಕಾಡಾನೆ ಹಾವಳಿಯಿಂದ ಮುಕ್ತಿ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ನಿರಂತರ ಒತ್ತಾಯದ ಮೇರೆಗೆ ಈ ಭಾಗಕ್ಕೆ ಪ್ರತ್ಯೇಕ ‘ಆನೆ ಕಾರ್ಯಪಡೆ’ (Elephant Task Force) ರಚನೆಗೆ ಅಂತಿಮ ಅನುಮೋದನೆ ದೊರೆತಿದೆ.

ಶಾಸಕರ ಮನವಿಗೆ ಮುಖ್ಯಮಂತ್ರಿ ಸ್ಪಂದನೆ: ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಕಾಡಾನೆಗಳ ದಾಳಿಯಿಂದ ಕೃಷಿ ನಾಶವಾಗುತ್ತಿರುವುದಲ್ಲದೆ, ಅಮಾಯಕ ಜೀವಗಳು ಬಲಿಯಾಗುತ್ತಿವೆ. ಈ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಆರ್ಥಿಕ ಇಲಾಖೆಯಲ್ಲಿ ಬಾಕಿ ಇದ್ದ ಕಡತಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.

ಏನಿರಲಿದೆ ಈ ಕಾರ್ಯಪಡೆಯಲ್ಲಿ? ಅರಣ್ಯ ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯ ಆದೇಶದಂತೆ ಈ ಕೆಳಗಿನ ಸೌಲಭ್ಯಗಳು ಕಾರ್ಯಪಡೆಗೆ ಲಭ್ಯವಿರಲಿವೆ:

  • ವಾಹನಗಳ ನಿಯೋಜನೆ: ಆನೆಗಳ ಚಲನವಲನ ಗುರುತಿಸಿ ತಕ್ಷಣ ಸ್ಥಳಕ್ಕೆ ಧಾವಿಸಲು 03 ಬೊಲೆರೋ ಜೀಪ್‌ಗಳು ಮತ್ತು 02 ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸಲಾಗುತ್ತಿದೆ.

    kadaba times
    kadaba times
  • ತುರ್ತು ನಿರ್ವಹಣೆ: ಆನೆಗಳನ್ನು ಕಾಡಿಗೆ ಅಟ್ಟಲು ಅವಶ್ಯಕವಿರುವ ವಾಕಿ-ಟಾಕಿ, ಗನ್, ಪಟಾಕಿ ಮತ್ತು ಇತರ ರಕ್ಷಣಾ ಪರಿಕರಗಳನ್ನು ಒದಗಿಸಲು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.

  • ಗಸ್ತು ಮತ್ತು ಜಾಗೃತಿ: ಆನೆಗಳು ಜನವಸತಿ ಪ್ರದೇಶಕ್ಕೆ ಬರದಂತೆ ತಡೆಯಲು ನಿರಂತರ ಗಸ್ತು ನಡೆಸಲಾಗುವುದು ಹಾಗೂ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗುವುದು.

  • ಕಂಟ್ರೋಲ್ ರೂಂ: ಕಾರ್ಯಪಡೆಯ ಸುಗಮ ನಿರ್ವಹಣೆಗಾಗಿ ವಿಶೇಷ ನಿಯಂತ್ರಣ ಕೊಠಡಿ ಸ್ಥಾಪನೆಯಾಗಲಿದ್ದು, ಸಾರ್ವಜನಿಕರು ದೂರು ನೀಡಲು ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುವುದು.

ಪೊಲೀಸ್ ಇಲಾಖೆಯ ಸಹಕಾರ: ಕಾಡಾನೆ ದಾಳಿ ತಡೆಗಟ್ಟುವ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯವನ್ನೂ ಪಡೆಯಲು ಈ ಆದೇಶದಲ್ಲಿ ತಿಳಿಸಲಾಗಿದೆ. ಶಾಸಕರ ಈ ಯಶಸ್ವಿ ಪ್ರಯತ್ನಕ್ಕೆ ಕ್ಷೇತ್ರದ ರೈತರು ಮತ್ತು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Latest Articles