ಕುಕ್ಕೆ ಸುಬ್ರಹ್ಮಣ್ಯ: ಹೋಟೆಲ್ ನಿಂದ ಲ್ಯಾಪ್ ಟಾಪ್ ಕಳವು:ಕೆಲಸಕ್ಕೆ ಬಂದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿದ ಮ್ಯಾನೇಜರ್

kadaba times

ಸುಬ್ರಹ್ಮಣ್ಯ: ಹೋಟೆಲ್ ನಿಂದ ಲ್ಯಾಪ್ ಟಾಪ್ ಕಳವಾಗಿರುವುದಾಗಿ  ಸಿಬ್ಬಂದಿಯ ವಿರುದ್ದವೇ ಆರೋಪ ಹೊರಿಸಿ ಹೋಟೆಲ್ ಮ್ಯಾನೇಜರ್ ದೂರು ನೀಡಿದ್ದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times

ಈ ಸುದ್ದಿ ಓದಿರಿ:ಕುಕ್ಕೆ ಸುಬ್ರಹ್ಮಣ್ಯ: ಅಪರಿಚಿತರಿಂದ ಮಕ್ಕಳ ವಿಚಾರಣೆ,ಅಪಹರಣ ಸುದ್ದಿಯ ಜಾಡು ಹಿಡಿದ ಪೊಲೀಸರು

ಕೆಲ ತಿಂಗಳ ಹಿಂದೆ ಗುಜರಾತ್‌ ಮೂಲದ ಅವಿನಾಶ್‌ ಪಾಂಡ್‌  ಎಂಬಾತ ಹೋಟೆಲ್ ಕೆಲಸಕ್ಕೆ ಕೆಲಸ ಮಾಡಿಕೊಂಡಿದ್ದ. ನ.7 ರಂದು ಯಾರಿಗೂ ತಿಳಿಸದೆ ಹೋಗಿದ್ದ. ಹೋಟೆಲ್ ನಲ್ಲಿದ್ದ ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ಕಾಣೆಯಾಗಿದ್ದು ಅನುಮಾನಕೊಂಡು ಜೌರಮ್ ಹೋಟೆಲ್ ಮ್ಯಾನೇಜರ್ ಮಹಾವೀರ್ ಸಿಂಗ್   ಆತನಿಗೆ ಪೋನ್ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ   ಲ್ಯಾಪ್‌ ಟಾಪ್‌ ಮತ್ತು ಫೋನ್‌ ತೆಗೆದುಕೊಂಡು ಹೋಗಿರುವುದನ್ನು ಒಪ್ಪಿಕೊಂಡಿದ್ದ  ಎಂದು ಹೇಳಲಾಗಿದೆ.

ಈ ಸುದ್ದಿ ಓದಿರಿ:ಪಂಜ ಗ್ರಾಮ ಪಂಚಾಯತ್ ನಲ್ಲಿ  ಹಣ ದುರುಪಯೋಗ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ

uniq
kadaba times

ನ.11 ಮೊಬೈಲ್‌ ಫೋನ್‌ ನನ್ನು  ಕೋರಿಯರ್‌ ಮುಖಾಂತರ ಕಳುಹಿಸಿದ್ದು  ಆದರೆ ಲ್ಯಾಪ್‌ ಟಾಪ್‌ ನ್ನು ಕಳುಹಿಸಿರುವುದಿಲ್ಲ ಆತನನ್ನು ಮೊಬೈಲ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು ಆತನು ಫೋನ್‌ ರಿಸೀವ್‌ ಮಾಡಿರುವುದಿಲ್ಲ ನಮ್ಮ ಹೋಟೇಲ್‌ನಿಂದ ನಮಗೆ ತಿಳಿಯದಂತೆ ಕಳವು ಮಾಡಿಕೊಂಡು ಹೋಗಿರುವ  ಲ್ಯಾಪ್‌ಟಾಪ್‌ ಮೌಲ್ಯ 30,000/ ಆಗಬಹುದಾಗಿರುತ್ತದೆ.

ಈ ಬಗ್ಗೆಹೋಟೆಲ್ ಮ್ಯಾನೆಜರ್ ನೀಡಿದ ದೂರಿನಂತೆ  ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಅ.ಕ್ರ:64/2025  ಕಲಂ:305 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles