ಪಂಜ ಗ್ರಾಮ ಪಂಚಾಯತ್ ನಲ್ಲಿ  ಹಣ ದುರುಪಯೋಗ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ

ಹಣದ ವ್ಯವಹಾರಗಳನ್ನು ನೋಡಿಕೊಳ್ಳುವುದು ಪಿಡಿಒ, ಕಾರ್ಯದರ್ಶಿಗಳ ಜವಾಬ್ದಾರಿ

kadaba times

ಪಂಜ : ಇಲ್ಲಿನ  ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಬಡಪಾಯಿ ಸಿಬ್ಬಂದಿಯ ತಲೆಗೆ ಕಟ್ಟಿದ್ದಾರೆ. ಬಿಜೆಪಿ ಹಿಂದಿನಿಂದಲೂ ಧರ್ಮ ದೇವರ ಹೆಸರು ಹೇಳಿ ತಾವು ಮಾಡಿದ ತಪ್ಪುಗಳನ್ನು ಮುಚ್ವುತ್ತಾ ಬಂದಿದ್ದಾರೆ. ಕಾಂಗ್ರೆಸ್ ಎಲ್ಲವನ್ನೂ ಕ್ಷಮಿಸುತ್ತದೆ. ಆದರೆ ಭ್ರಷ್ಟಾಚಾರವನ್ನು ಮಾತ್ರ ಕ್ಷಮಿಸುವುದಿಲ್ಲ” ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಡಿ. 17 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

kadaba times
uniq

ಪಂಜ ಗ್ರಾ.ಪಂ.ನಲ್ಲಿ ಇತ್ತೀಚೆಗೆ ನಡೆದ ಹಣದ ದುರುಪಯೋಗ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿ.ಪಂ. ಸಿಇಒ ರವರಿಗೆ ಮನವಿ, ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಸಲಾಯಿತು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡುತ್ತಾ ” ಪ್ರಾಮಾಣಿಕತೆ ಇಲ್ಲದ ಜನರು ಅಧಿಕಾರದ ಚುಕ್ಕಾಣಿ ಹಿಡಿದರೆ ಪಂಜ ಪಂಚಾಯತ್ ಗೆ ಆದ ಗತಿಯೇ ಆಗುವುದು. ಆಗ ನಾಗರಿಕ ಸಮಾಜ ಎಚ್ಚೆತ್ತುಕೊಂಡು ಅದನ್ನು ವಿರೋಧಿಸಬೇಕಾಗುತ್ತದೆ” ಎಂದರು. ಬಳಿಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಪಿಡಿಒ ಮತ್ತು ಉಪಾಧ್ಯಕ್ಷರು ಬಾಬುರವರ ಮನೆಗೆ ಹೋಗಿ ಚಿನ್ನಾಭರಣ, ಹಣ ಇದೆಯಾ ಎಂದು ಹುಡುಕಾಡಿದ್ದಾರೆ. ಎಲ್ಲೆಲ್ಲಿಯೋ ಕರೆಸಿ ಪ್ರಮಾಣ ಮಾಡಿಸಿದ್ದಾರೆ. ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ. ಹಣದ ವ್ಯವಹಾರಗಳನ್ನು ನೋಡಿಕೊಳ್ಳುವುದು ಪಿಡಿಒ, ಕಾರ್ಯದರ್ಶಿಗಳ ಜವಾಬ್ದಾರಿ ಎಂದರು.

ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ” ಕೇವಲ 21 ಲಕ್ಷದಷ್ಟು ತೆರಿಗೆ ಹಣ ಸಂಗ್ರಹಿಸುವ ಪಂಚಾಯತ್ ನಲ್ಲಿ 13-14 ಲಕ್ಷ ಭ್ರಷ್ಟಾಚಾರ ಮಾಡಿದ್ದಾರೆ ಎಂದಾದರೆ ಪರ್ಸೆಂಟೇಜ್ ಎಷ್ಟಾಯಿತು? ದೇಶಭಕ್ತರೆನಿಕೊಂಡಿರುವ, ಪ್ರಜ್ಞಾವಂತರೆನಿಸಿಕೊಂಡಿರುವ ಕೆಲವು ನಾಯಕರ ಪಟ್ಟದ ಶಿಷ್ಯರು ಇಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದರು.

kadaba times
kadaba times

ಪ್ರತಿಭಟನೆಗೂ ಮೊದಲು ಪಂಚಾಯತ್ ಮುಂಭಾಗದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪಂಚಾಯತ್ ಗೆ ಮತ್ತು ಬಿಜೆಪಿಗೆ ದಿಕ್ಕಾರ ಹಾಕಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಪರವಾಗಿ ಸಿಬ್ಬಂದಿ ರವಿಚಂದ್ರರಲ್ಲಿ ಪಂಜ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಕುಸುಮಾಧರ ಕೆರೆಯಡ್ಕ ಮನವಿ ನೀಡಿದರು. ಬಳಿಕ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳೊಂದಿಗೆ ಪಂಜ ಬಸ್‌ನಿಲ್ದಾಣದ ತನಕ ಮೆರವಣಿಗೆ ಬಂದು ಅಲ್ಲಿ ದೀನದಯಾಳ್ ಕಾಂಪ್ಲೆಕ್ಸ್ ಎದುರು ಸಭೆ ನಡೆಸಿದರು

ಸಭಾಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಚೇತನ್ ಕಜೆಗದ್ದೆ, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜಾನಿ, ಕೆಪಿಸಿಸಿ ರಾಜ್ಯ ಸಂಯೋಜಕರಾದ ಕೃಷ್ಣಪ್ಪ, ಕೆಪಿಸಿಸಿ ಸದಸ್ಯೆ ಶ್ರೀಮತಿ ಸರಸ್ವತಿ ಕಾಮತ್, ಸುಳ್ಯ ಎಸ್.ಸಿ. ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಎಸ್.ಸಿ. ಘಟಕದ ಮಾಜಿ ಅಧ್ಯಕ್ಷ ಆನಂದ ಬೆಳ್ಳಾರೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಪಂಜ ಗ್ರಾ.ಪಂ. ಸದಸ್ಯ ಲಕ್ಷ್ಮಣ ಬೊಳ್ಳಾಜೆ, ಪರಮೇಶ್ವರ ಕೆಂಬಾರೆ, ರಾಜೀವಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಪಂಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಸುಮಾಧರ ಕೆರೆಯಡ್ಕ, ಶ್ರೇಯಾಂಶ್ ಕುಮಾರ್ ಶೆಟ್ಟಿಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Latest Articles