
ಕಡಬ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆಯು ಡಿಸೆಂಬರ್ 28 ರಂದು ಕಡಬ ಸೌರಭ ಟವರ್ಸ್ ನ ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ.


ಈ ಸುದ್ದಿಯನ್ನು ಓದಿರಿ: ಕಡಬ: ಕಬ್ಬಿಣದ ಸ್ಟಾಂಡ್ ಮೇಲೆ ಕಾಲು ಇಟ್ಟು ಕುಳಿತಿರುವುದನ್ನು ಪ್ರಶ್ನಿಸಿದಕ್ಕೆ ಹಲ್ಲೆ-ಬೆದರಿಕೆ
ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ತಂಡ ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸುತ್ತಿದೆ.
ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯ ಡಾ| ಅಂಕಿತಾ ಕಲ್ಯಾಡಿ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಟೀಮ್ ಈಶ್ವರ್ ಮಲ್ಪೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.


ಈ ಸುದ್ದಿ ಓದಿರಿ: Heart Attack:ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ವಿದ್ಯಾರ್ಥಿನಿ ಮೃತ್ಯು
ಭಾನುವಾರ ಬೆಳಗ್ಗೆ 10:00 ರಿಂದ 5:00 ರವರೆಗೆ ಈ ಶಿಬಿರ ನಡೆಯಲ್ಲಿ ಪ್ರಮುಖ ಸೂಚನೆಗಳು ಇಲ್ಲಿವೆ:
- ನೋಂದಣಿ ಕಡ್ಡಾಯವಾಗಿದ್ದು 89712 70256 , 94484 46145 , 89518 04399 ಕರೆಮಾಡಿ ನೋಂದಾಯಿಸಿಕೊಳ್ಳಿ.
- ಹಿರಿಯರಿಗೆ ಮೊದಲ ಆದ್ಯತೆ. (ಮನೆಯವರೊಂದಿಗೆ ಬರಬೇಕು)
- ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ (Old Report) ಇದ್ದರೆ ಜೊತೆಯಲ್ಲಿ ತನ್ನಿ.
- ಮೊದಲು ನೋಂದಾಯಿಸುವ 30 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
- ಈಶ್ವರ್ ಮಲ್ಪೆ ಟೀಮ್ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸುತ್ತಾರೆ.
