ಅನಧಿಕೃತ ಕಟ್ಟೆಯೊಳಗೆ ಧ್ವಜ, ತೋರಣ ಕಟ್ಟಿದನ್ನು ತೆರವು ಗೊಳಿಸಿದ ಅಧಿಕಾರಿಗಳು

kadaba times

ಸವಣೂರು/ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡು ಪಾಲು ಬಿದ್ದ ಕಟ್ಟೆಯೊಳಗೆ ಕೆಲವರು ಧ್ವಜ ಹಾಗೂ ತೋರಣ ಕಟ್ಟಿ ವಿವಾದ ಸೃಷ್ಟಿಸಲು ಯತ್ನಿಸಿದ ಆರೋಪ ವ್ಯಕ್ತವಾಗಿತ್ತು.

kadaba times
uniq

ಈ ಸುದ್ದಿ ಓದಿರಿ: ಕಡಬದಲ್ಲಿ ಡಿಸೆಂಬರ್ 28 ಕ್ಕೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ  ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ

ಕೆಲವು ವರ್ಷಗಳ ಹಿಂದೆ ಇದೇ ಕಟ್ಟೆಯ ನಿರ್ಮಾಣ ವಿಚಾರದಲ್ಲಿ ವಿವಾದ ಉಂಟಾಗಿ ಗದ್ದಲ ಸೃಷ್ಟಿಯಾಗಿತ್ತು. ವಿಚಾರ ಪೊಲೀಸ್ ಇಲಾಖೆಗೂ ತಲುಪಿತ್ತು.  ನಂತರದ ಬೆಳವಣಿಗೆಯಲ್ಲಿ  ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕೂಡಲೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಜೆಸಿಬಿ ಮೂಲಕ ಸ್ಥಳದಲ್ಲಿದ್ದ ಅನಧಿಕೃತ ಕಟ್ಟೆಯನ್ನೇ ಡಿ.17 ರಂದು ತೆರವುಗೊಳಿಸಿದ್ದಾರೆ.

kadaba times
kadaba times

ಈ ಸುದ್ದಿ ಓದಿರಿ: ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಡಿವೈಎಸ್ಪಿ ಅರುಣ್ ನಾಗೇ ಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐ ಗುಣಪಾಲ್, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಮುಂಡೂರು ಗ್ರಾ.ಪಂ ಪಿಡಿಒ ಜಗದೀಶ್, ಕಾರ್ಯದರ್ಶಿ ಸೂರಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Latest Articles