ಮದುವೆ ದಿಬ್ಬಣ ಹೊರಟಿದ್ದ ಬಸ್ಸಿನೊಳಗೆ ಹೆಬ್ಬಾವು

kadaba times

 ಮದುವೆ ದಿಬ್ಬಣದ ಬಸ್ಸಿನೊಳಗೆ ಹೆಬ್ಬಾವೊಂದು ಮಲಗಿಕೊಂಡಿದ್ದನ್ನು ವ್ಯಕ್ತಿಯೊಬ್ಬರು  ಹಿಡಿದು ಹೊರಗೆ ಸಾಗಿಸಿದ ಘಟನೆ ಮೂಡಬಿದಿರೆಯಲ್ಲಿ ಮಂಗಳವಾರ  ಸಂಜೆ ನಡೆದಿದೆ.

kadaba times
uniq

ಪುತ್ತೂರಿನಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ದಿಬ್ಬಣದ ಬಸ್ಸನ್ನು ಕಾಫಿಗೆಂದು  ಜೈನ ಪೇಟೆಯ ಗೋಳಿಬಜೆ ಸೆಂಟರ್ ಹೋಟೆಲ್ ಬದಿಯಲ್ಲಿ  ನಿಲ್ಲಿಸಲಾಗಿತ್ತು.

kadaba times
kadaba times

ಪ್ರಯಾಣಿಕರು ಇಳಿದ ಬಳಿಕ ಚಾಲಕ ಬಸ್ಸಿನೊಳಗೆ ನೋಡುವಾಗ ಹೆಬ್ಬಾವೊಂದು ಸುಮ್ಮನೆ ಬಿದ್ದುಕೊಂಡಿದ್ದನ್ನು ಗಮನಿಸಿದರು.ಕೂಡಲೇ ಹಾವು ಹಿಡಿಯುವುದರಲ್ಲಿ ನಿಷ್ಣಾತರಾದ ದಿನೇಶ್ ಅವರಿಗೆ ಕರೆ ಮಾಡಿದ್ದು, ಅವರು ಬಂದು ಹಾವನ್ನು ಹೊರಗೆ ತಂದು ಸುರಕ್ಷಿತ ತಾಣಕ್ಕೆ ಬಿಟ್ಟಿರುವುದಾಗಿ ತಿಳಿದು ಬಂದಿದೆ.

Related Articles

Latest Articles