
ಮದುವೆ ದಿಬ್ಬಣದ ಬಸ್ಸಿನೊಳಗೆ ಹೆಬ್ಬಾವೊಂದು ಮಲಗಿಕೊಂಡಿದ್ದನ್ನು ವ್ಯಕ್ತಿಯೊಬ್ಬರು ಹಿಡಿದು ಹೊರಗೆ ಸಾಗಿಸಿದ ಘಟನೆ ಮೂಡಬಿದಿರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.


ಪುತ್ತೂರಿನಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ದಿಬ್ಬಣದ ಬಸ್ಸನ್ನು ಕಾಫಿಗೆಂದು ಜೈನ ಪೇಟೆಯ ಗೋಳಿಬಜೆ ಸೆಂಟರ್ ಹೋಟೆಲ್ ಬದಿಯಲ್ಲಿ ನಿಲ್ಲಿಸಲಾಗಿತ್ತು.


ಪ್ರಯಾಣಿಕರು ಇಳಿದ ಬಳಿಕ ಚಾಲಕ ಬಸ್ಸಿನೊಳಗೆ ನೋಡುವಾಗ ಹೆಬ್ಬಾವೊಂದು ಸುಮ್ಮನೆ ಬಿದ್ದುಕೊಂಡಿದ್ದನ್ನು ಗಮನಿಸಿದರು.ಕೂಡಲೇ ಹಾವು ಹಿಡಿಯುವುದರಲ್ಲಿ ನಿಷ್ಣಾತರಾದ ದಿನೇಶ್ ಅವರಿಗೆ ಕರೆ ಮಾಡಿದ್ದು, ಅವರು ಬಂದು ಹಾವನ್ನು ಹೊರಗೆ ತಂದು ಸುರಕ್ಷಿತ ತಾಣಕ್ಕೆ ಬಿಟ್ಟಿರುವುದಾಗಿ ತಿಳಿದು ಬಂದಿದೆ.
