ರೆಂಜಿಲಾಡಿ ಸಂತ ತೋಮಸ್ ಓರ್ಥೋಡೋಕ್ಸ್ ಸಿರಿಯನ್ ಚರ್ಚ್‌:  ಪುನರ್‌ನಿರ್ಮಿತ ನೂತನ ದೇವಾಲಯದ ಪವಿತ್ರೀಕರಣ

kadaba times

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಸಂತ ತೋಮಸ್ ಓರ್ಥೋಡೋಕ್ಸ್ ಸಿರಿಯನ್ ಚರ್ಚ್‌ನ ಪುನರ್‌ನಿರ್ಮಿತ ನೂತನ ದೇವಾಲಯದ ಎರಡು ದಿನಗಳ ಪವಿತ್ರೀಕರಣ ಕಾರ್ಯಕ್ರಮ ನಡೆಯಿತು.

kadaba times
uniq

ಬುಧವಾರದಂದು  ಕಡಬ ಪೇಟೆಯಿಂದ ನಾಗರಿಕ ಸನ್ಮಾನದೊಂದಿಗೆ ಪರಮಪೂಜ್ಯ ಕಾಥೋಲಿಕೋಸ್ ಹಾಗೂ ಇತರ ಧರ್ಮಾಧ್ಯಕ್ಷರನ್ನು ವಿವಿಧ ಚರ್ಚ್‌ಗಳ ಧರ್ಮಗುರುಗಳು ಮತ್ತು ಸಂಘಟನೆಗಳ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ಚರ್ಚ್ ಆವರಣದವರೆಗೆ ಕರೆತರಲಾಯಿತು. ಸಾವಿರಾರು ಭಕ್ತರು ಮತ್ತು ಗಣ್ಯರು ಪಾಲ್ಗೊಂಡರು.

ಧ್ವಜಸ್ಥಂಭದ ಶುದ್ಧೀಕರಣ ಮತ್ತು ದ್ವಜಾರೋಹಣ ಕಾರ್ಯಕ್ರಮ, , ಪ್ರಾರ್ಥನೆ, ದೇವಾಲಯ ಪವಿತ್ರೀಕರಣದ ಮೊದಲ ಹಂತ ನಡೆಯಿತು.

kadaba times
kadaba times

ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ಫಾ.ಪೌಲ್ ಜೇಕಬ್, ಕಾರ್ಯದರ್ಶಿ ಜೆಬಿನ್ ಜೆ.ಪಿ, ಕೋಶಾಧಿಕಾರಿ ವಿನೋದ್ ಟಿ.ಟಿ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಸಮಿತಿ ಪದಾಧಿಕಾರಿಗಳು, ಚರ್ಚ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Articles

Latest Articles