ಇಚಿಲಂಪಾಡಿಯ ಕಾಯರ್ತಡ್ಕ ಬಳಿ ಮುರಿದು ಬಿದ್ದ ಮರ:ಅಪಘಾತಕ್ಕೆ ಆಹ್ವಾನ

kadaba times

ಕಡಬ: ಇಲ್ಲಿನ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಇಚಿಲಂಪಾಡಿಯಲ್ಲಿ ಮುರಿದು ಬಿದ್ದ ಮರ ರಸ್ತೆ ಬದಿಯಲ್ಲೇ ಇದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

kadaba times
uniq

ಪೆರಿಯಶಾಂತಿ- ಇಚಿಲಂಪಾಡಿ ನಡುವಿನ   ಕಾಯರ್ತಡ್ಕ ಬಳಿ ಈ ಮರದ ಗೆಲ್ಲುಗಳು ರಸ್ತೆಯನ್ನೇ ಆಕ್ರಮಿಸಿದೆ. ಈಗಾಗಲೇ ಷಷ್ಠಿ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ರಾತ್ರಿ-ಹಗಲು ವಾಹನಗಳ ಓಡಾಟ ಹೆಚ್ಚಾಗಿದೆ.

kadaba times
kadaba times

ರಸ್ತೆಯ ಇನ್ನೊಂದು ಕಡೆ   ಮರದ ಬುಡವಿದ್ದು ಈ ಕಡೆ ಅದನ್ನು ಎಳೆದು ಹಾಕಿದಂತಿದೆ. ವಾಹನ ಸವಾರರೇ ಸಂಚಾರಕ್ಕಾಗಿ  ಮಾಡಿರಬಹುದೆಂದು ಹೇಳಲಾಗಿದೆ.   ಮುರಿದು ಬಿದ್ದಿದ್ದರೂ ತೆರವು ಮಾಡದಿರುವುದು   ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ  ಇದೊಂದು ಉದಾಹರಣೆ ಎಂದು ವಾಹನ  ಸವಾರರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

Related Articles

Latest Articles