
ನಮ್ಮ ಕಡಬಕ್ಕೆ ಹೆಮ್ಮೆ: ದುಬೈನಲ್ಲಿ ನಡೆದ ಮಿಸೆಸ್ ಮಂಗಳೂರು ದಿವಾ 2025 ಸ್ಪರ್ಧೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ, ಪ್ರಸ್ತುತ ದುಬೈಯಲ್ಲಿ ನೆಲೆಸಿರುವ ಮಿನು ಜೋಸ್ ಅವರು ಈ ಬಾರಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.


ಪ್ರಿಯಾ ಫ್ಯಾಶನ್ಸ್ ಸಂಸ್ಥೆ ಈ ಸ್ಪರ್ಧೆಯನ್ನು ಗೋಶನ್ ಈವೆಂಟ್ ಮೀಡಿಯಾ ಸಹಯೋಗದೊಂದಿಗೆ ಆರೋಜಿಸಿತ್ತು .ಆಕರ್ಷಕ ವೇಷಭೂಷಣ, ಆತ್ಮ ವಿಶ್ವಾಸಭರಿತ ಪ್ರದರ್ಶನ, ಸರಳ ವ್ಯಕ್ತಿತ್ವದಿಂದ ಮಿನು ಜೋಸ್ ಅವರು ದುಬೈ ತೀರ್ಪುಗಾರರ ಮೆಚ್ಚುಗೆ ಗಳಿಸಿದರು.
ಈ ಸ್ಪರ್ಧೆಯಲ್ಲಿ ನಯನಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಹಾಗೂ ಅಶ್ಮಿತಾ ಕೊಟ್ಯಾನ್ ಸೆಕೆಂಡ್ ರನ್ನರ್ ಅಪ್ ಆದರು. ಮಿಸ್ ವಿಭಾಗದಲ್ಲಿ ತನುಶ್ರೀ ಶೆಟ್ಟಿ ವಿಜೇತೆ ಆಗಿ, ಶೆರ್ಲಿ ಕ್ರಾಸ್ತಾ ಫಸ್ಟ್ ರನ್ನರ್ ಅಪ್ ಮತ್ತು ಸಿಂಥಿಯಾ ಡಿ’ಸೋಝಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಂಗಳೂರು ಮೂಲದ ಪ್ರತಿಭೆಗಳಿಗೆ ತಮ್ಮ ಕಿರೀಟದ ಕನಸನ್ನು ನನಸು ಮಾಡಿಕೊಳ್ಳಲು ಈ ವೇದಿಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಇವರ ಈ ಸಾಧನೆ ವಿದೇಶದಲ್ಲಿರುವ ಕರಾವಳಿ ಮಹಿಳೆಯರಿಗೆ ಪ್ರೇರಣೆಯಾದಂತಾಗಿದೆ.


ಕೊಕ್ಕಡ ಸಮೀಪದ ಶಿಶಿಲದಲ್ಲಿ ಜನಿಸಿದ ಮಿನು ಜೋಸ್, ನೆಲ್ಯಾಡಿಯ ಯುವಕನನ್ನು ವಿವಾಹವಾಗಿದ್ದು, ಪ್ರಸ್ತುತ ದುಬೈನಲ್ಲಿ ವಾಸವಾಗಿದ್ದಾರೆ. ಭವಿಷ್ಯದಲ್ಲೂ ಇಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಊರಿಗೆ ಹೆಸರು ತಂದುಕೊಡಲು ಇನ್ನಷ್ಟು ಯಶಸ್ಸು ಕಾಣಲಿ ಎಂಬುದು ನಮ್ಮ ಹಾರೈಕೆ ಎಂದು ಪತಿ ಅನೂಪ್ ಜೋಸ್, ಮಗಳು ಐಝಲ್ ಎಲಿಜಬೆತ್ ಹರ್ಷ ವ್ಯಕ್ತಪಡಿಸಿದ್ದಾರೆ.
