ರಸ್ತೆಯಲ್ಲಿ ತಡೆದು ನಿಲ್ಲಿಸಿ ರೇಪ್ ಮಾಡುವುದಾಗಿ ಬೆದರಿಸಿದ ಪ್ರಕರಣ: ಆರೋಪಿ ದೋಷಮುಕ್ತ

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ:  ಯುವತಿಯ ಮೊಬೈಲ್ ಫೊನ್‌ಗೆ ಕರೆ ಮಾಡಿ ಕಿರುಕುಳ ನೀಡಿದ್ದಲ್ಲದೆ ರಸ್ತೆಯಲ್ಲಿ ತಡೆದು ನಿಲ್ಲಿಸಿ ರೇಪ್ ಮಾಡುವುದಾಗಿ ಬೆದರಿಸಿದ ಪ್ರಕರಣದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

kadaba times
uniq

ವಿದೀಪ್ ಕುಮಾರ್ ಎಂಬಾತ ತನ್ನ ಮೊಬೈಲ್ ಫೋನ್‌ನಿಂದ ಯುವತಿಯೋರ್ವಳ ಮೊಬೈಲ್ ಫೋನ್‌ಗೆ ಕರೆ ಮಾಡಿ ಪೀಡಿಸುತ್ತಿದ್ದ.

ಯುವತಿ ತನ್ನ ಮನೆಗೆ  ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ ಸೈಕಲಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸಂಜೆ  ಕೆದಂಬಾಡಿ ಗ್ರಾಮದ ತಿಂಗಳಾಡಿ ದರ್ಬೆ ಎಂಬಲ್ಲಿ ಮೋಟಾರ್ ಸೈಕಲಿನಿಂದ ಇಳಿದು ಯುವತಿಯ ಬಳಿಗೆ ಬಂದು ಮುಂದಕ್ಕೆ ನಡೆದುಕೊಂಡು ಹೋಗದಂತೆ ತಡೆದು ನಿಲ್ಲಿಸಿ ನನಗೆ ನೀನು ಬೇಕು. ನಾನು ನಿನಗೋಸ್ಕರ ಯಾರನ್ನು ಬೇಕಾದರೂ ಬಿಟ್ಟು ಬಿಡುತ್ತೇನೆ.  ನೀನು ನನ್ನ ಜೊತೆ ಬರಬೇಕು. ಇಲ್ಲದಿದ್ದರೆ ಈ ರಸ್ತೆಯಲ್ಲಿಯೇ ನಿನ್ನನ್ನು ರೇಪ್ ಮಾಡಿ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಕಲಂ 506, 354(D) 341 ಐ.ಪಿ.ಸಿಯಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

kadaba times
kadaba times

ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್.ರವರು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿ ವಿದೀಪ ಕುಮಾರ್‌ನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರ ವಕೀಲರಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದ್ದರು.

Related Articles

Latest Articles