ಕಡಬದ ಹಸಿಮೀನು ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ನಡುವೆ ಹೊಡೆದಾಟ

kadaba times

ಕಡಬ: ಇಲ್ಲಿನ ಸಂತೆಕಟ್ಟೆ ಬಳಿ ಇರುವ ಹಸಿಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ಕಡಿಮೆ ದರ ಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದ ಘಟನೆ ನ.1 ರಂದು ನಡೆದಿರುವುದಾಗಿ ತಿಳಿದು ಬಂದಿದೆ.

kadaba times
uniq

ಈ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳು ಹೊಡೆದಾಟ ಮಾಡಿಕೊಳ್ಳುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಏಲಂ ಮೂಲಕ ಹಸಿಮೀನು ಮಾರುಕಟ್ಟೆಯ ಸ್ಟಾಲನ್ನು ಪಡೆದುಕೊಂಡಿದ್ದ ವ್ಯಾಪಾರಿಯೊಬ್ಬರು ನ. 2 ರ ವರೆಗೆ ” ಎರಡು ಕೆಜಿ ಬಂಗುಡೆಗೆ ಒಂದು ಕೆ.ಜಿ ಬೂತಾಯಿ ಮೀನು” ನೀಡುವ ಬಗ್ಗೆ ಪ್ರಚಾರ ಮಾಡಿದ್ದರು. ಹೀಗಾಗಿ ಮೀನು ಖರೀದಿಗೆ ಜನ ಹೆಚ್ಚು ಆಗಮಿಸಿದ್ದರು. ಇದರಿಂದ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಸ್ಟಾಲ್ ನ ಹಿರಿಯ ವ್ಯಾಪಾರಿಯೊಬ್ಬರು   ಗ್ರಾಹಕರನ್ನು ಜೋರು ಧ್ವನಿಯಲ್ಲಿ ಕರೆಯದೆ ವ್ಯಾಪಾರ ಮಾಡುವಂತೆ ವಿನಂತಿಸಿಕೊಂಡಿದ್ದರು ಎನ್ನಲಾಗಿದೆ.

kadaba times
kadaba times

ನಂತರದ ಬೆಳವಣಿಗೆಯಲ್ಲಿ ಗ್ರಾಹಕರನ್ನು ತಮ್ಮತ್ತ ಕರೆಯುವ ವಿಚಾರದಲ್ಲಿ ಇತ್ತಂಡಗಳ ನಡುವೆ  ಮಾತಿಗೆ ಮಾತು  ಬೆಳೆದು ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಕೆಲವರು ಇತ್ತಂಡಗಳ ಹೊಡೆದಾಟವನ್ನು ಬಿಡಿಸಲು ಮುಂದಾಗಿದ್ದಾರೆ.  ಸದ್ಯ ಹೊಡೆದಾಟದ ವೀಡಿಯೋ ತುಣುಕು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪೊಲೀಸರ ಪರಿಶೀಲನೆಯ ಬಳಿಕ ವಾಸ್ತವ  ವಿಚಾರ ತಿಳಿದು ಬರಳಿದೆ.

Related Articles

Latest Articles