
ಕಡಬ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಮನವಿ ಪತ್ರವನ್ನು ಅ.27ರಂದು ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.


ನೇತ್ರಾವತಿ ತುಳುಕೂಟ ರಾಮಕುಂಜ ಇವರ ನೇತೃತ್ವದಲ್ಲಿ ತೆಗ್ರ್ ತುಳುಕೂಟ ನೂಜಿಬಾಳ್ತಿಲ ಇದರ ಆಶ್ರಯದಲ್ಲಿ ಕಡಬ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದಲ್ಲಿ ಈ ಸಮ್ಮೇಳನ ನಡೆಯಲಿದೆ.


ಈ ಸಂದರ್ಭದಲ್ಲಿ ನೇತ್ರಾವತಿ ತುಳುಕೂಟದ ಅಧ್ಯಕ್ಷ ಕೆ.ಸೇಸಪ್ಪ ರೈ, ನೂಜಿಬಾಳ್ತಿಲ ತೆಗ್ರ್ ತುಳುಕೂಟದ ಸಂಚಾಲಕ ಉಮೇಶ್ ಸಾಯಿರಾಮ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್, ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಕುಂಟೋಡಿ, ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರೈ, ಸತೀಶ್ ಕರ್ಮೇಣ, ದಯಾನಂದ ಗೌಡ ಪುರಿಯ, ಚನ್ನಕೇಶವ ಗುತ್ತುಪಾಲು, ರಮೇಶ್ ರೈ ರಾಮಜಾಲು, ಸರಿತಾ ಜನಾರ್ದನ, ಕಿಶೋರ್ ಕುಮಾರ್ ಬಿ. ಉಪಸ್ಥಿತರಿದ್ದರು.
