ಕಡಬ ಪ.ಪಂ ವ್ಯಾಪ್ತಿ:ಕಳಾರದಲ್ಲಿ ಚರಂಡಿ ದುರಸ್ಥಿತಿಗೆ ವರ್ತಕರ ಅಸಹಕಾರ

kadaba times

ಕಡಬ: ವಾರದ ಹಿಂದೆ ಭಾರೀ ಸುರಿದ ಮಳೆಗೆ ಕಡಬ.ಪಂ  ವ್ಯಾಪ್ತಿಯ ಚರಂಡಿಗಳಲ್ಲಿ ಸಮರ್ಪಕ ನೀರು ಹರಿಯದೆ ಹಲವರಿಗೆ ತೊಂದರೆಯಾಗಿತ್ತು.   ಈ ಸುದ್ದಿಯ ಬೆನ್ನೆಲ್ಲೇ ಪ.ಪಂ ಅಧ್ಯಕ್ಷೆ ತಮ್ಮನಾ ಜಬೀನ್ ಮತ್ತು ಮುಖ್ಯಾಧಿಕಾರಿ  ಲೀಲಾವತಿ ಅವರು    ಕೆಲ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು.  ಈ ವೇಳೆ  ಅಧ್ಯಕ್ಷರ  ಮನವಿಯಂತೆ   ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಪ್ರಮೋದ್ ಅವರು  ಇಂಜಿನಿಯರ್ ಆಗಮಿಸಿದ್ದರು.

kadaba times
uniq

ಈ  ಸಂದರ್ಭದಲ್ಲಿ  ಪರಿಶೀಲನೆಯ ಬಳಿಕ  ಮುಖ್ಯ ರಸ್ತೆಯ ಎರಡು ಕನಿಗಳ ಮಣ್ಣು ಮತ್ತು ರಸ್ತೆಯಲ್ಲಿ ಬದಿಯಲ್ಲಿ ತುಂಬಿರುವ ಕಾಡು,  ಮಣ್ಣಿನ ರಾಶಿಯನ್ನು ತೆಗೆದು  ಚರಂಡಿಯಲ್ಲಿ ನೀರು ಹಾದುಹೋಗುವ ಹಾಗೆ ಮಾಡುವುದಾಗಿ ತೀರ್ಮಾನಿಸಲಾಗಿತ್ತು.

ಇದೀಗ  ಪ.ಪಂ ವ್ಯಾಪ್ತಿಯ ಮನೆಮಜಲು ವಾರ್ಡಿನ  ಕಳಾರದಲ್ಲಿ  ಮುಖ್ಯ ರಸ್ತೆಯ ಚರಂಡಿ ದುರತಿ ವೇಳೆ ಕೆಲ ಅಂಗಡಿ ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಅಲ್ಲದೆ ಚರಂಡಿ ದುರಸ್ತಿ  ವ್ಯವಸ್ಥಿತ ರೂಪದಲ್ಲಿ ಮಾಡುತ್ತಿಲ್ಲವೆಂದು ತಗಾದೆ ತೆಗೆದಿದ್ದಾರೆ.   ಸ್ಥಳೀಯರ ಸಹಕಾರ ಇಲ್ಲದ ಕಾರಣ    ಜೆಸಿಬಿ ಚಾಲಕ ಕೆಲಸ ಸ್ಥಗಿತಗೊಳಿಸಿ ಬೇರೆ ಕರೆಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ.

                           ಚರಂಡಿಯನ್ನು ಮುಚ್ಚಿರುವುದು(KADABA TIMES)

ಪ್ರಸ್ತುತ ಇರುವ ಚರಂಡಿಯಲ್ಲೇ ಕೆಲವರು  ತಮ್ಮ ಅಂಗಡಿಗೆ ಹೋಗಲು, ಮನೆಗೆ ತೆರಳಲು ದಾರಿ ಮಾಡಿಕೊಂಡಿದ್ದಾರೆ. ಏಕಾಏಕಿ ತೆಗೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ  ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ದುರಸ್ತಿ ವೇಳೆ ಈಗಾಗಲೇ ಇದ್ದ ಚರಂಡಿಯನ್ನು ಮುಚ್ಚಿ ಕಾಮಗಾರಿ ಆರಂಭಿಸಿದರೂ ತೆರಳುವಾಗ ಮತ್ತೆ ತೆರವು ಮಾಡದ ಹಿನ್ನೆಲೆ ನೀರು ಸಂಗ್ರಹಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ.

kadaba times
kadaba times
ಹೊಸಮಠ ಬಳಿ ರಸ್ತೆ ಬದಿಯಲ್ಲೇ ಮಣ್ಣು ಹಾಕಿರುವುದು (KADABA TIMES)

ಕೆಸರು ಮಣ್ಣು ರಸ್ತೆ ಬದಿಯೇ ರಾಶಿ ಹಾಕಿದ್ರು:  ಚರಂಡಿಯನ್ನು ದುರಸ್ತಿ ಮಾಡುವ ವೇಳೆ ಹೆಚ್ಚುವರಿ ಕೆಸರು ಮಣ್ಣನ್ನು ಬೇರೆಕಡೆಗೆ ಹಾಕುವಂತೆ ಪ.ಪಂ ನಿರ್ದೇಶನ ನೀಡಿತ್ತು. ಅದರಂತೆ ಕಳಾರ ಮಸೀದಿ ಬಳಿ ಇರುವ ಸ್ಥಳೀಯರೊಬ್ಬರ ಜಾಗದಲ್ಲಿ ಕೆಸರು ಮಿಶ್ರಿತ ಮಣ್ಣು ಹಾಕಲು ಒಪ್ಪಿಗೆ ನೀಡಿದ್ದರು.ಆದ್ರೆ ಪಕ್ಕದ ರಸ್ತೆಯಲ್ಲಿ ಹೋಗುವ ವ್ಯಕ್ತಿಯೊಬ್ಬರು ಅದಕ್ಕೂ ತಗಾದೆ ತೆಗೆದಿದ್ದಾರೆ. ಅಲ್ಲದೆ ಹೆಚ್ಚು ಕೆಸರು ಮಣ್ಣು ಹಾಕಿದರೆ ಸಮಸ್ಯೆಯಾಗಬಹುದೆಂದು ಬೇರೆಡೆಗೆ ಕೊಂಡೊಯ್ದಿದ್ದಾರೆ.   ವಿಪರ್ಯಾಸವೆಂದರೆ ಚರಂಡಿಯಲ್ಲಿ ತೆಗೆದ ಕೆಸರು ಮಿಶ್ರಿತ ಮಣ್ಣನ್ನು ಹೊಸಮಠ ಸೇತುವೆ ಬಳಿಯ ರಸ್ತೆ ಪಕ್ಕದಲ್ಲಿ ಹಾಕಿರುವುದು ಕಂಡು ಬಂದಿದೆ . ಇದನ್ನು ಜನರು ಪ್ರಶ್ನಿಸಿದ್ದಾರೆ. ಅಲ್ಲದೆ ಸೂಕ್ತ ಜಾಗದಲ್ಲಿ ಹಾಕುವಂತೆ ಒತ್ತಾಯಿಸಿದ್ದಾರೆ.

ಪ.ಪಂ ನೋಟಿಸ್ ಮಾಡಬಾರದೇಕೆ?: ಈಗಾಗಲೇ ಚರಂಡಿ ಪಕ್ಕದಲ್ಲೇ ನೀರಿನ ಪೈಪುಗಳು ಹಾದು ಹೋಗಿವೆ, ಕೆಲವರು ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ.  ಪ.ಪಂ ವ್ಯಾಪ್ತಿಯ ರಸ್ತೆಯುದ್ದಕ್ಕೂ ಎಲ್ಲಾ  ಚರಂಡಿಗೆ ತಾಗಿಕೊಂಡಿರುವ ಅಂಗಡಿ ಮಾಲಕರಿಗೆ ನೋಟಿಸ್ ಕೊಡುವ ಕೆಲಸ ಪ.ಪಂ ಮಾಡಬೇಕಿದೆ.  ಸಹಕರಿಸದವರಿಗೆ ಇಲಾಖಾ ನಿಯಮದಂತೆ ಕ್ರಮಕೈಗೊಳ್ಳುವ ಬಗ್ಗೆಯೂ ಪ.ಪಂ ನಿರ್ಧರಿಸಬೇಕಿದೆ. ಈಗಾಗಲೇ  ಅ.30 ರಂದು ಸಾಮಾನ್ಯ ಸಭೆ ನಡೆಯಲಿದ್ದು ಅಲ್ಲಿ  ವರ್ತಕರ ಮತ್ತು ಸಾರ್ವಜನಿಕರ ಸಹಕಾರದ ಬಗ್ಗೆ  ಸರಿಯಾದ ತೀರ್ಮಾಣ ಕೈಗೊಳ್ಳಬೇಕಿದೆ.

ಈ ಬಗ್ಗೆ  ಕಡಬ ಟೈಮ್ಸ್ ಜೊತೆ ಮಾತನಾಡಿರುವ  ಪ.ಪಂ  ಮನೆಮಜಲು ವಾರ್ಡ್ ಸದಸ್ಯ  ರೋಹಿತ್ ಅವರು, ಕಳಾರದಲ್ಲಿ ಚರಂಡಿ ದುರಸ್ತಿ ಮಾಡಲಾಗುತ್ತದೆ. ಹೆಚ್ಚುವರಿ ಮಣ್ಣನ್ನು ರಸ್ತೆ ಬದಿ ಹಾಕಿರುವುದು ನನ್ನ ಗಮನಕ್ಕೆ ಬಂದಿದೆ,  ಅದನ್ನು ಸಂಬಂಧಿಸಿದವರಿಗೆ ತಿಳಿಸಿ ತೆರವುಗೊಳಿಸಲು ಸೂಚಿಸಲಾಗುವುದು ಎಂದಿದ್ದಾರೆ.

Related Articles

Latest Articles