ಆಲಂಕಾರು ಮುಖ್ಯ ಪೇಟೆಯಲ್ಲಿ ಮರಣ ಬಾವಿಯಂತಿರುವ ಬೃಹತ್ ಗಾತ್ರದ ಮೋರಿಯ ಗುಂಡಿ!

kadaba times

ಆಲಂಕಾರು: ಇಲ್ಲಿನ ಮುಜಖ್ಯ  ಪೇಟೆಯ ಮೂಲಕ ಹಾದು ಹೋಗುವ  ಉಪ್ಪಿನಂಗಡಿ-  ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಬೃಹತ್ ಗಾತ್ರದ ಮೋರಿಯ ಗುಂಡಿ ಅಪಾಯಕ್ಕೆ ಆಹ್ವಾನಿಸುತ್ತಿದೆ.  ನೆಲ್ಯಾಡಿ ಕಡೆಯಿಂದ  ಸುರುಳಿ ಮೂಲಕ ಆಲಂಕಾರು ಪೇಟೆಯನ್ನು ಸಂಪರ್ಕಿಸುವ ರಸ್ತೆ ಜಂಕ್ಷನ್ ಪಕ್ಕದಲ್ಲಿಯೇ ಸುಮಾರು 10 ಅಡಿ ಆಳದ ಬೃಹತ್ ಗಾತ್ರದ ಮೋರಿಯ ಗುಂಡಿಗೆ ತಡೆ ಬೇಲಿ ಇಲ್ಲದಿರುವ ಹೊಂಡ  ಮರಣ ಬಾವಿಯಾಗಿ ಮಾರ್ಪಾಡಾಗಿದೆ.

kadaba times
uniq

 

ಹೆದ್ದಾರಿಯ ರಸ್ತೆ ಅಭಿವೃದ್ದಿ ಮಾಡುವ ಸಂದರ್ಭ  ಆಲಂಕಾರು ಪೇಟೆಯಲ್ಲಿಯಲ್ಲಿನ ರಸ್ತೆಗಳು  ಅಮೂಲಾಗ್ರ ಬದಲಾಣೆಯಾಗಿತ್ತು. ಆಲಂಕಾರು ಪೇಟೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಕಾಂಕ್ರೀಟ್‌ಕರಣಗೊಂಡಿತು. ಈ ವೇಳೆ ಪೇಟೆಯ ತ್ಯಾಜ್ಯ ನೀರು ಪೇಟೆಯಿಂದ ಹೊರ ಹೋಗಲು ರಾಜ್ಯ ಹೆದ್ದಾರಿಗೆ ಬೃಹತ್ ಮೋರಿ ಅಳವಡಿಸಿ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.

 

ಅಭಿವೃದ್ದಿಯ ವಿಚಾರದಲ್ಲಿ ನಿರ್ಮಿಸಲಾದ ಮೋರಿಯ ಗುಂಡಿಗೆ ಸೂಕ್ತವಾದ ರಕ್ಷಣಾ ಬೇಲಿಯಾಗಲಿ ತಡೆಗೋಡೆಯಾಗಲಿ ನಿರ್ಮಾಣ ಮಾಡದೆ ಅಪಾಯವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ನಿತ್ಯವು ಕೊಳಚೆ ನೀರಿನಿಂದ ತುಂಬಿರುವ ಈ ಗುಂಡಿಗೆ ಈಗಾಗಲೇ ಕೆಲವರು  ಆಯ ತಪ್ಪಿ ಬಿದ್ದು ಮಿಂದೆದ್ದು ಬಂದಿದ್ದಾರೆ. ಹಲವು ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿದ್ದು ಹಲವರು ಗಾಯಗೊಂಡ ಪ್ರಕರಣಗಳು ನಡೆದಿವೆ. ಇಷ್ಟೆಲ್ಲ ಅಪಾಯಗಳು ಸಂಭವಿಸುತ್ತಿದ್ದರು ಗುಂಡಿಗೆ ಸೂಕ್ತ ರಕ್ಷಣಾ ಬೇಲಿ ನಿರ್ಮಿಸುವ ಕಾರ್ಯ ಮಾಡಬೇಕಾಗಿದೆ.

kadaba times
kadaba times

 

ರಾಜ್ಯ ಹೆದ್ದಾರಿಯಲ್ಲಿ ನಿತ್ಯವು ವಾಹನ ಸಂಚಾರ ದಟ್ಟಣೆ ಇರುವುದರಿಂದ ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ಈಗಾಗಲೇ ಹಲವು ದ್ವಿ ಚಕ್ರ ವಾಹನಗಳು ಸೇರಿದಂತೆ ಕಾರುಗಳು ಜಾನುವಾರುಗಳು ಈ ಗುಂಡಿಗೆ ಬಿದ್ದು ಹಲವು ಅಪಾಯಗಳು ಸಂಭವಿಸಿದೆ ಈ ಹೊಂಡ ದ  ವಾಣಿಜ್ಯ ಕಟ್ಟಡಗಳಿದ್ಧು ವ್ಯವಹಾರಿಕ್ಕಾಗಿ ಬರುವ ಜನ,ವಾಹನಗಳು ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ಸಂಬಂಧ ಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕಾಗಿ ವಿನಂತಿದ್ದಾರೆ.

 

ಅಲಂಕಾರು ಗ್ರಾ‌ಪಂ ಅಧ್ಯಕ್ಷೆ  ಸುಶೀಲ ಅವರು ಪ್ರತಿಕ್ರಿಯೆ ನೀಡಿ, ರಾಜ್ಯ ಹೆದ್ದಾರಿ ಬಳಿಯ ಈ ಅಪಾಯಕಾರಿ ಗುಂಡಿಗೆ  ತಡೆಗೋಡೆ ರಚನೆಗೆ ಲಕ್ಷಾಂತರ ರೂಪಾಯಿಯ ಅನುದಾನ ಅಗತ್ಯವಿದೆ. ಈ ಮೊತ್ತವನ್ನು ಗ್ರಾಮ ಪಂಚಾಯತಿಯಿಂದ  ಭರಿಸಲು ಅಸಾಧ್ಯ. ಮುಂದಿನ ಸಾಮಾನ್ಯ ಸಭೆಯಲ್ಲಿ  ವಿಚಾರವಾಗಿ ಸರ್ವ ಸದಸ್ಯರಲ್ಲಿ ಚರ್ಚಿಸಿ ಕ್ರಿಯಾ ಯೋಜನೆಯನ್ನು ರಚಿಸಿಕೊಂಡು ಕ್ಷೇತ್ರದ ಶಾಸಕರಿಗೆ ಅನುದಾನಕ್ಕಾಗಿ ಬೇಡಿಕೆ ನೀಡಲಾಗುವುದು ಎಂದಿದ್ದಾರೆ.

Related Articles

Latest Articles