ಕಡಬ: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ (ರಿ) ತಾಲೂಕು ಶಾಖೆ ವತಿಯಿಂದ ಕಡಬ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.


ಈ ವೇಳೆ ತಾಲೂಕು ಸಂಘಟನಾ ಸಂಚಾಲಕ ಚಂದ್ರಹಾಸ ಬಲ್ಯ ಅವರು ಮಾತನಾಡಿ, ಅಂಬೇಡ್ಕರ್ರವರ ಚಿಂತನೆ ಸದಾ ನಮಗೆಲ್ಲರಿಗೂ ಉತ್ತಮ ಮಾರ್ಗದರ್ಶಿಯಾಗಿದೆ ಎಂದರು. ತಾಲೂಕು ಸಂಚಾಲಕ ವಸಂತ ಕುಬಲಾಡಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ಎಂಬ ಶ್ರೇಷ್ಠ ಗ್ರಂಥದ ಮೂಲಕ ಎಲ್ಲರ ಬದುಕಿಗೊಂದು ದಾರಿ, ಪ್ರಜಾಪ್ರಭುತ್ವಕ್ಕೊಂದು ಅರ್ಥ ತಂದುಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.ಅವರ ತತ್ವಗಳು ನಮಗೆ ಸ್ಪೂರ್ತಿ ಎಂದರು .






ಪ್ರಮುಖರಾದ ಶಶಿಧರ್ ಬೊಟ್ಟಡ್ಕ, ಆನಂದ ಹೊಸ್ಮಠ, ಶೇಖರ್ ಮರುವಂತಿಲ, ರಾಜೇಶ್ ಪಾಟ್ನ, ವರದರಾಜ್ ಮರ್ದಾಳ, ಶಿವು ಮರ್ದಾಳ, ಅಕ್ಷಯ್ ಚಾವ೯ಕ, ಚರಣ್, ಪ್ರವೀಣ್ ಉಪಸ್ಥಿತರಿದ್ದರು. ಆನಂದ ಕಜೆ ಕಾರ್ಯಕ್ರಮ ನಿರೂಪಿಸಿದರು.