ಕಡಬ ಟೈಮ್ಸ್ (KADABA TIMES): ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಕಡಬ ಇದರ ಆಶ್ರಯದಲ್ಲಿ ಕಡಬ ದುರ್ಗಂಬಿಕಾ ಅಮ್ಮನವರ ದೇವಸ್ಥಾನದ ಸಭಾಭಾವನದಲ್ಲಿ ಚಿಣ್ಣರ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ ಗೊಂಡಿತು.


ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಕಡಬ ಇದರ ಪೂರ್ವಧ್ಯಕ್ಷ ದಿನೇಶ್ ಆಚಾರ್ಯ ಕಡಬ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಶಿಬಿರಕ್ಕೆ ಶುಭ ಹಾರೈಸಿದರು.






ಶಿಬಿರ ಸಂಘಟಕ ವಸಂತ್ ಆಚಾರ್ಯ ಕಾಯರ್ತೋಡಿ, ಸಂಪನ್ಮೂಲ ವ್ಯಕ್ತಿ ರಾಜಮುಖೇಶ್ ಸುಳ್ಯ ಉಪಸ್ಥಿತರಿದ್ದರು ಭವಾನಿ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಒಂದು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಮೊ ಸಂಖ್ಯೆ 9341126 119
94497 43007ಸಂಪರ್ಕಿಸಬಹುದು.