ಕಡಬ: ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳಿಗೆ ಹಿನ್ನೆಡೆ

kadaba times

ಮಂಗಳೂರು / ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಶಾಲಾ ಮಕ್ಕಳ ಮೇಲಿನ ಹಲ್ಲೆ ಪ್ರಕರಣ  ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಅಟ್ರಾಸಿಟಿ ಪ್ರಕರಣದ (Crime No. 0097/2026) ಎಫ್‌ಐಆರ್ ರದ್ದುಗೊಳಿಸಲು ಕೋರಿ ಆರೋಪಿಗಳ ಪರವಾಗಿ ಸಲ್ಲಿಸಲಾಗಿದ್ದ  ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣವನ್ನು ರದ್ದುಗೊಳಿಸಲು (Quash) ನಿರಾಕರಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯವರೆಗೆ ಕೇವಲ ತನಿಖಾ ಪ್ರಕ್ರಿಯೆಗೆ ಮಾತ್ರ ಮಧ್ಯಂತರ ತಡೆಯಾಜ್ಞೆ ನೀಡಿದೆ.

kadaba times
uniq

ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರ್ಜಿದಾರ ರಮೇಶ್ ಕೆ. ಅವರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ (CRL.P No. 13222/2026) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಆದೇಶ ನೀಡಿದೆ.

ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಮುಖ್ಯಾಂಶಗಳು:

  • ಆಗಸ್ಟ್ 28 ರ ವಿಚಾರಣೆ – ಅಟ್ರಾಸಿಟಿ ಅಂಶಗಳ ಪ್ರಶ್ನೆ: 28 ಆಗಸ್ಟ್ 2026 ರಂದು ನಡೆದ ಪ್ರಾಥಮಿಕ ವಿಚಾರಣೆಯಲ್ಲಿ, ಅಪ್ರಾಪ್ತ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು 11.08.2026 ರಂದು ನೀಡಲಾದ ದೂರಿನ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೆ, ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿರುವ ಕುರಿತು ಹೈಕೋರ್ಟ್ ಪ್ರಶ್ನಿಸಿತ್ತು. ಅಲ್ಲದೆ, ದೂರಿನಲ್ಲಿ ಅಟ್ರಾಸಿಟಿ ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಆ ಕಾಯ್ದೆಗೆ ಸಂಬಂಧಿಸಿದ ತನಿಖೆಗೆ ಮೊದಲ ಹಂತದಲ್ಲಿ ಮಧ್ಯಂತರ ತಡೆ ನೀಡಿ ಸರ್ಕಾರಿ ವಕೀಲರಿಗೆ ವಿವರಣೆ ನೀಡಲು ಸೂಚಿಸಿತ್ತು.

  •  ಪ್ರಕರಣವನ್ನು ಪುನಃ ಕೈಗೆತ್ತಿಕೊಂಡ ನ್ಯಾಯಪೀಠವು, 1ನೇ ಪ್ರತಿವಾದಿಯಾದ ರಾಜ್ಯ ಸರ್ಕಾರಕ್ಕೆ ನೋಟಿಸ್ ಸ್ವೀಕರಿಸಲು ಸರ್ಕಾರಿ ವಕೀಲರಿಗೆ ನಿರ್ದೇಶಿಸಿದ್ದು, 2ನೇ ಪ್ರತಿವಾದಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಜೊತೆಗೆ, ಪ್ರಕರಣದ ಮುಂದಿನ ವಿಚಾರಣೆಯವರೆಗೆ ಪೊಲೀಸರ ತನಿಖೆಗೆ ಮಧ್ಯಂತರ ತಡೆ ನೀಡಿದೆ.

    kadaba times
    kadaba times

ಆರೋಪಿಗಳಿಗೆ ಸಿಕ್ಕಿದ್ದು ಕೇವಲ ಮಧ್ಯಂತರ ರಿಲೀಫ್: ಕಡಬ ಠಾಣೆಯಲ್ಲಿ ದಾಖಲಾಗಿರುವ ಅಟ್ರಾಸಿಟಿ ಕೇಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು (Quashing of FIR) ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸಿಲ್ಲ. ಬದಲಾಗಿ ಪ್ರಕರಣದ ತನಿಖೆಯನ್ನು ಮುಂದಿನ ವಿಚಾರಣೆಯವರೆಗಷ್ಟೇ ಮುಂದುವರಿಸದಂತೆ ಮಧ್ಯಂತರ ತಡೆಯನ್ನು ಮಾತ್ರ ನೀಡಿದೆ.

ಸದ್ಯ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ ದಾಖಲೆಗಳ ಪ್ರಕಾರ ಪ್ರಕರಣದ ಸ್ಥಿತಿಯು ಇನ್ನೂ “Pending” (ವಿಚಾರಣಾ ಹಂತದಲ್ಲಿ ಬಾಕಿ) ಎಂದೇ ತೋರಿಸುತ್ತಿದ್ದು, ಮುಂದಿನ ವಿಚಾರಣೆಯ ದಿನಾಂಕದಂದು ಸರ್ಕಾರದ ಪರ ವಕೀಲರ ವಾದದ ಬಳಿಕ ನ್ಯಾಯಾಲಯ ಅಂತಿಮ ಆದೇಶ ಪ್ರಕಟಿಸಲಿದೆ.

ಘಟನೆಯ ಹಿನ್ನೆಲೆ: ಕಳೆದ ಆಗಸ್ಟ್ 03 ರಂದು ಶಾಲೆಗೆ ರಜೆ ಇದ್ದ ಕಾರಣ, 9ನೇ ತರಗತಿಯ 14 ವರ್ಷದ ಅಪ್ರಾಪ್ತ ಬಾಲಕನು ತನ್ನ ಇಬ್ಬರು ಸಹಪಾಠಿಗಳೊಂದಿಗೆ ಬಂಟ್ರ ಗ್ರಾಮದ ಕುಂಡಡ್ಕ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದನು.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಬಾಲಕಿಯೊಬ್ಬಳ ತಂದೆ (A1), ಉಮೇಶ್ (A2), ದೇವಿಪ್ರಸಾದ್ (A3), ರೋಹಿತ್ (A4) ಹಾಗೂ ಚಂದನ್ (A5) ಎಂಬವರು ಬಾಲಕರನ್ನು ತಡೆದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಬಗ್ಗೆ ಆರೋಪಿಸಲಾಗಿತ್ತು ಬಳಿಕ .ತಲೆಮರೆಸಿಕೊಂಡಿದ್ದ ಐವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿ್ತ್ತು.

Related Articles

Latest Articles