ಆಲಂಕಾರು ಬಳಿ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಪಲ್ಟಿ

kadaba times

ಆಲಂಕಾರು: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂಡಾಜೆ ತಿರುವಿನಲ್ಲಿ ಬೆಳೆದಿರುವ ರಸ್ತೆ ಗುಂಡಿಗೆ ಬಿದ್ದು ದ್ವಿಚಕ್ರ ವಾಹನವೊಂದು ಪಲ್ಟಿಯಾದ ಘಟನೆ ಶುಕ್ರವಾರ (ಸೆ. 4) ನಡೆದಿದೆ. ಅದೃಷ್ಟವಶಾತ್ ಚಾಲಕ  ಅಪಾಯದಿಂದ ಪಾರಾಗಿದ್ದಾರೆ.

kadaba times
uniq

ಘಟನೆಯ ವಿವರ: ಸೆ. 4ರಂದು ಆಲಂಕಾರು ಕಡೆಯಿಂದ ಗೋಳಿತ್ತಡಿ ಕಡೆಗೆ ಸಾಗುತ್ತಿದ್ದದ್ವಿಚಕ್ರ ವಾಹನ ಸವಾರರೊಬ್ಬರು ಕುಂಡಾಜೆ ತಿರುವಿನಲ್ಲಿದ್ದ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮವಾಗಿ ವಾಹನವು ಪಲ್ಟಿಯಾಗಿ ಜಖಂಗೊಂಡಿದೆ. ಅಪಘಾತ ನಡೆದ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಹಿಂಬದಿಯಿಂದ ಅಥವಾ ಎದುರಿನಿಂದ ಯಾವುದೇ ಇತರೆ ವಾಹನಗಳು ಬಾರದೇ ಇದ್ದುದರಿಂದ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಸವಾರರ ನಿರಂತರ ಸರ್ಕಸ್ – ಸಾರ್ವಜನಿಕರ ಆಕ್ರೋಶ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂಡಾಜೆ ತಿರುವಿನಲ್ಲಿ ರಸ್ತೆ ಅಕ್ಷರಶಃ ಹೊಂಡ-ಗುಂಡಿಗಳಿಂದ ಕೂಡಿದ್ದು, ನಿತ್ಯ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸರ್ಕಸ್ ಮಾಡುತ್ತಾ ಸಾಗಬೇಕಾದ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುವಿನ ಜಾಗದಲ್ಲೇ ಗುಂಡಿಗಳಿರುವುದರಿಂದ ವೇಗವಾಗಿ ಬರುವ ವಾಹನಗಳಿಗೆ ಇವು ತಕ್ಷಣಕ್ಕೆ ಕಾಣಿಸದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

kadaba times
kadaba times

ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ (PWD) ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಹೆದ್ದಾರಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಹಾಗೂ ವಾಹನ ಸವಾರರು  ಒತ್ತಾಯಿಸಿದ್ದಾರೆ.

Related Articles

Latest Articles