
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ವಲಯದ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ವತಿಯಿಂದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಹಿಂದೂ ರುದ್ರಭೂಮಿ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.


ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಕಡಬ ವಲಯದ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ವತಿಯಿಂದ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ಲಂತಡ್ಕ ಹಿಂದೂ ರುದ್ರಭೂಮಿಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಯಂಸೇವಕರಿಂದ ಶ್ರಮದಾನ: ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸ್ಮಶಾನದ ಆವರಣದಲ್ಲಿ ತುಂಬಿಕೊಂಡಿದ್ದ ಕಸ-ಕಡ್ಡಿಗಳನ್ನು ವಿಲೇವಾರಿ ಮಾಡಿದ್ದಲ್ಲದೆ, ಆವರಣದಲ್ಲಿ ಮಳೆಗಾಲದಲ್ಲಿ ಹೇರಳವಾಗಿ ಬೆಳೆದುನಿಂತಿದ್ದ ಹುಲ್ಲು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ ಸುಸ್ಥಿತಿಗೆ ತಂದರು.


ಈ ಸಮಾಜಮುಖಿ ಸ್ವಚ್ಛತಾ ಅಭಿಯಾನದಲ್ಲಿ ಪ್ರಕಾಶ್ ಕುಮಾರ್ (ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ), ಕೆ. ಎಂ. ಹನೀಫ್ – (ಅಧ್ಯಕ್ಷರು, ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ), ದಯಾನಂದ ಪಿಜಕಳ –( ಸದಸ್ಯರು, ಕಡಬ ಪಟ್ಟಣ ಪಂಚಾಯತ್), ವಿಜೇಶ್ ಜೈನ್ –( ಮೇಲ್ವಿಚಾರಕರು, ಕಡಬ ವಲಯ) ಇವರೊಂದಿಗೆ ಶೌರ್ಯ ಘಟಕದ ಸ್ವಯಂಸೇವಕರಾದ ಧನಂಜಯ, ಹರೀಶ್, ಉಮೇಶ್, ಗಣೇಶ್, ಲೋಕೇಶ್, ನಳಿನಿ, ವೇಣುಗೋಪಾಲ, ಆನಂದ ಹಾಗೂ ಕಡಬ ಪಟ್ಟಣ ಪಂಚಾಯತ್ನ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಶ್ರಮದಾನಕ್ಕೆ ಕೈಜೋಡಿಸಿದರು.
