ಕಡಬ ಪೇಟೆಯಲ್ಲಿ ಮೊಳಗಿದ ದೇಶಭಕ್ತಿಯ ಜಯಘೋಷ: ಭವ್ಯ ಪಂಜಿನ ಮೆರವಣಿಗೆ

kadaba times

ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಘಟಕದ ವತಿಯಿಂದ ಭಾರತ ಮಾತಾ ಪೂಜನಾ ಹಾಗೂ ‘ಅಖಂಡ ಭಾರತ ಸಂಕಲ್ಪ ದಿನಾಚರಣೆ’ ಅಂಗವಾಗಿ ಆಗಸ್ಟ್ 14ರ ಸಂಜೆ ಕಡಬ ಪೇಟೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ಜರುಗಿತು. ಶ್ರೀ ಗಣೇಶ್ ಬಿಲ್ಡಿಂಗ್ ವಠಾರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ರಾಷ್ಟ್ರಭಕ್ತಿ ಘೋಷಣೆಗಳೊಂದಿಗೆ ಪಾಲ್ಗೊಂಡರು.

kadaba times
uniq

ಕಡಬ: 1947ರ ಆಗಸ್ಟ್ 14ರ ಕರಾಳ ರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ‘ಭಾರತ ಮಾತಾ ಪೂಜನಾ ಹಾಗೂ ಅಖಂಡ ಭಾರತ ಸಂಕಲ್ಪ ದಿನಾಚರಣೆ’ಯ ಅಂಗವಾಗಿ ಆ.14ರ ಶುಕ್ರವಾರ ಸಂಜೆ ಕಡಬ ಮುಖ್ಯ ಪೇಟೆಯಲ್ಲಿ ಭವ್ಯ ‘ಪಂಜಿನ ಮೆರವಣಿಗೆ’ ನೆರವೇರಿತು.

 ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ವಠಾರದಿಂದ ಆರಂಭಗೊಂಡ ಪಂಜಿನ ಮೆರವಣಿಗೆಯು ಕಡಬ ಮುಖ್ಯ ಪೇಟೆಯ ಮೂಲಕ ಕಡಬ–ಪಂಜ ರಸ್ತೆಯವರೆಗೆ ಸಾಗಿತು. ಕೈಯಲ್ಲಿ ಉರಿಯುವ ಪಂಜುಗಳನ್ನು ಹಿಡಿದ  ಕಾರ್ಯಕರ್ತರು ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಎಂಬ  ರಾಷ್ಟ್ರಭಕ್ತಿ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡದ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಸಂಯೋಜಕ  ಮೋಹನ್ ಕಡಬ ಸೇರಿದಂತೆ ಹಿಂದೂಪರ ಸಂಘಟನೆಗಳ ತಾಲೂಕು ಪ್ರಮುಖರು, ಸದಸ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದರು.

kadaba times
kadaba times

ಮೆರವಣಿಗೆಯ ಬಳಿಕ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (CA Bank) ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ

Related Articles

Latest Articles