ಕಡಬ: ಇಸ್ಪೀಟ್ ಅಡ್ಡೆಗೆ ಖಾಕಿ ದಾಳಿ ಪ್ರಕರಣ: ತೋಟದ ಮಾಲೀಕ ಸೇರಿ 8 ಮಂದಿ ವಿರುದ್ಧ ಸುಮೋಟೋ ಕೇಸ್

kadaba times

ಕಡಬ:ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆನೆರೆಂಕಿ ಗ್ರಾಮದ ಕುನ್ನಿಕು ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಕಡಬ ಪೊಲೀಸರು ದಿಢೀರ್ ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿ ವಾಹನಗಳು ಹಾಗೂ ನಗದನ್ನು ಜಪ್ತಿ ಮಾಡಿದ್ದಾರೆ.

kadaba times
uniq

​ಕಡಬ ತಾಲೂಕಿನ ಕುದ್ಮಾರು ಗ್ರಾಮದ ಜನತಾ ಕಾಲೋನಿ ನಿವಾಸಿ ಗುರುವ (44) ಬಂಧಿತ ಆರೋಪಿ.

​ಸೋಲಾರ್ ಟೆಂಟ್‌ನಲ್ಲಿ ಜುಗಾರಿ – ಪೊಲೀಸರ ಮಿಂಚಿನ ದಾಳಿ:ದಿನಾಂಕ 28.08.2026 ರಂದು ಸಂಜೆ ಕಡಬ ಪೊಲೀಸ್ ಉಪನಿರೀಕ್ಷಕರಾದ (PSI) ಜಂಬುರಾಜ್ ಮಹಾಜನ್ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಹಳೆನೆರೆಂಕಿ ಗ್ರಾಮದ ಕುನ್ನಿಕು ಎಂಬಲ್ಲಿರುವ ಮೋಹನದಾಸ್ ರೈ ಎಂಬವರ ತೋಟದ ಮನೆಯ ಪಕ್ಕದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

​ಪೊಲೀಸ್ ತಂಡವು ಪಂಚರೊಂದಿಗೆ ಸಂಜೆ 7:30 ರ ಸುಮಾರಿಗೆ ಸ್ಥಳಕ್ಕೆ ತೆರಳಿದಾಗ, ಪೊಲೀಸರನ್ನು ಕಂಡು ಇಸ್ಪೀಟ್ ಆಟಗಾರರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸೋಲಾರ್ ಟೆಂಟ್‌ನಲ್ಲಿದ್ದ ಗುರುವ ಎಂಬಾತನನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಆಟಗಾರರು ಕತ್ತಲಲ್ಲಿ ತೋಟದ ಕಡೆಗೆ ಓಡಿ ಪರಾರಿಯಾಗಿದ್ದಾರೆ.

​ವಿಚಾರಣೆ ವೇಳೆ, ತೋಟದ ಮಾಲೀಕ ಮೋಹನದಾಸ್ ರೈ ಅವರು ಕಮಿಷನ್ ಪಡೆದು ತಮ್ಮ ಸೋಲಾರ್ ಟೆಂಟ್‌ನಲ್ಲಿ ಇಸ್ಪೀಟ್ ಆಡಲು ಅವಕಾಶ ಮಾಡಿಕೊಟ್ಟಿರುವುದು ಹಾಗೂ ದಿನಾಲೂ ಸಂಜೆ ಇಲ್ಲಿ ಜುಗಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿ ಸಂಖ್ಯೆ

ಹೆಸರು

ವಿವರ / ವಿಳಾಸ

A1

ಮೋಹನದಾಸ್ ರೈ

ಕುನ್ನಿಕು, ಹಳೆನೆರೆಂಕಿ ಗ್ರಾಮ, ಕಡಬ (ಸ್ಥಳಾವಕಾಶ ನೀಡಿದವರು)

A2

ತಾಜುದ್ದೀನ್

ಕಡಬ

A3

ವಸಂತ

ದಕ್ಷಿಣ ಕನ್ನಡ

A4

kadaba times
kadaba times

ಇಬ್ರಾಹಿಂ

ದಕ್ಷಿಣ ಕನ್ನಡ

A5

ಹಮೀದ್

ದಕ್ಷಿಣ ಕನ್ನಡ

A6

ರಮೇಶ್

ದಕ್ಷಿಣ ಕನ್ನಡ

A7

ಗುರುವ (44)

ಜನತಾ ಕಾಲೋನಿ, ಕುದ್ಮಾರು ಗ್ರಾಮ, ಕಡಬ (ಬಂಧಿತ)

A8

ಅಪರಿಚಿತ ವ್ಯಕ್ತಿ

ದಕ್ಷಿಣ ಕನ್ನಡ

ವಶಪಡಿಸಿಕೊಂಡ ಸೊತ್ತುಗಳ ವಿವರ (ಒಟ್ಟು ಮೌಲ್ಯ: ₹1,62,700/-):

  • ​ಜುಗಾರಿಗೆ ಬಳಸಿದ್ದ ನಗದು ಹಣ ₹1,700/- (50 ರೂ.ನ 2 ಹಾಗೂ 100 ರೂ.ನ 16 ನೋಟುಗಳು)
  • ​52 ಇಸ್ಪೀಟ್ ಕಾರ್ಡ್‌ಗಳು ಹಾಗೂ ನೀಲಿ ಬಣ್ಣದ ಟರ್ಪಾಲ್
  • ​ಒಪ್ಪೋ (Oppo) ಕಂಪನಿಯ ಮೊಬೈಲ್ ಫೋನ್ (ಮೌಲ್ಯ ₹1,000)
  • ​ಆರೋಪಿಗಳು ಬಿಟ್ಟು ಓಡಿಹೋಗಿದ್ದ 6 ಜೊತೆ ಚಪ್ಪಲಿಗಳು
  • ​KA 21 EF 4601 ಹೋಂಡಾ ಆಕ್ಟಿವಾ ಸ್ಕೂಟರ್ (ಅಂದಾಜು ಮೌಲ್ಯ ₹35,000)
  • ​KA 19 MJ 1176 ಸಿಲ್ವರ್ ಬಣ್ಣದ ಮಾರುತಿ ಆಲ್ಟೋ 800 ಕಾರು (ಅಂದಾಜು ಮೌಲ್ಯ ₹1,00,000)
  • ​KA 21 W 2090 ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ (ಅಂದಾಜು ಮೌಲ್ಯ ₹25,000)

ಅಕ್ರಮ ಜುಗಾರಿ ದಂಧೆ ನಡೆಸಿದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 102/2026 ​ಕಲಂಗಳು: 78, 80 ಕರ್ನಾಟಕ ಪೊಲೀಸ್ ಕಾಯ್ದೆ (KP Act) ಹಾಗೂ ಕಲಂ 112 ಭಾರತೀಯ ನ್ಯಾಯ ಸಂಹಿತೆ (BNS 2023)​ಅಡಿಯಲ್ಲಿ ಸ್ವಯಂಪ್ರೇರಿತ (Suo Moto) ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Latest Articles