ಕುಕ್ಕೆ ಸುಬ್ರಹ್ಮಣ್ಯದ ಯುವಕರ ‘ಟೀಮ್ ಕುಕ್ಕೆ ವೈಬ್ಸ್ ಟೀಮ್: ದೇವರಿಗೆ ಸೇವಾರೂಪವಾಗಿ ರಥಬೀದಿಯಲ್ಲಿ ಮೊದಲ ಪ್ರದರ್ಶನ

kadaba times

ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ಥಳೀಯ ಯುವಕರ ತಂಡವಾದ “ಟೀಮ್ ಕುಕ್ಕೆ ವೈಬ್ಸ್” ವತಿಯಿಂದ ನಾಸಿಕ್ ಡೋಲ್ ವಾದನ ತಂಡವನ್ನು ನೂತನವಾಗಿ ಆರಂಭಿಸಲಾಗಿದೆ. ಜುಲೈ 26 ರಂದು ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ದೇವರಿಗೆ ಮೊದಲ ಪ್ರದರ್ಶನವನ್ನು ಸೇವಾರೂಪವಾಗಿ ಸಲ್ಲಿಸುವ ಮೂಲಕ ಈ ನಾಸಿಕ್ ಡೋಲ್ ತಂಡಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

kadaba times
uniq

ಸುಬ್ರಹ್ಮಣ್ಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕ್ರಿಯಾಶೀಲ ಯುವಕರ ತಂಡವಾದ “ಟೀಮ್ ಕುಕ್ಕೆ ವೈಬ್ಸ್” ವತಿಯಿಂದ ನೂತನ ನಾಸಿಕ್ ಡೋಲ್ ವಾದನ ತಂಡಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಜುಲೈ 26 ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಮೊದಲ ಪ್ರದರ್ಶನವನ್ನು ದೇವರಿಗೆ ಸೇವಾರೂಪವಾಗಿ ಸಮರ್ಪಿಸಲಾಯಿತು.

ಈ ಕಲಾ ತಂಡದ ಉದ್ಘಾಟನಾ ಕಾರ್ಯಕ್ರಮವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (AEO) ಯೇಸುರಾಜ್ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನೆರವೇರಿಸಿ ಶುಭಹಾರೈಸಿದರು.

kadaba times
kadaba times

ಹೊಸತನ ಮೂಡಿಸುವ ಯುವಕರ ಪ್ರಯತ್ನ:

ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ನಾಸಿಕ್ ಡೋಲ್ ವಾದನದ ಮೂಲಕ ಹೊಸತನ ಹಾಗೂ ಉತ್ಸಾಹ ಮೂಡಿಸುವ ಉದ್ದೇಶದಿಂದ ‘ಟೀಮ್ ಕುಕ್ಕೆ ವೈಬ್ಸ್’ ತಂಡದ ಸದಸ್ಯರು ಕಳೆದ ಕೆಲವು ದಿನಗಳಿಂದ ನಿರಂತರ ತರಬೇತಿ ಪಡೆದುಕೊಂಡಿದ್ದರು.

ತಮ್ಮ ಸುದೀರ್ಘ ಅಭ್ಯಾಸದ ನಂತರ ರೂಪುಗೊಂಡ ಈ ನಾಸಿಕ್ ಡೋಲ್ ವಾದನದ ಪ್ರಥಮ ಸಾರ್ವಜನಿಕ ಪ್ರದರ್ಶನವನ್ನು ಶ್ರೀ ಸುಬ್ರಹ್ಮಣ್ಯ ದೇವರ ರಥಬೀದಿಯಲ್ಲಿ ಸೇವಾರೂಪವಾಗಿ ನೀಡಿ ಭಕ್ತಾದಿ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

Related Articles

Latest Articles