
ಕಡಬ: ಉಪ್ಪಿನಂಗಡಿಯ ಬಟ್ಟೆ ಅಂಗಡಿಗೆ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ .


ಕಡಬ ಗ್ರಾಮದ ಕಲಾರ ಅಡ್ಪಾಡಿ ನಿವಾಸಿ ಅಬ್ದುಲ್ ರಶೀದ್ ಕೆ. ಎಂಬವರ ಪುತ್ರ ಮಹಮ್ಮದ್ ಅಕ್ಬರ್ (21 ವರ್ಷ) ಕಾಣೆಯಾದ ಯುವಕ.
ಜುಲೈ16 ರಂದು ಮುಂಜಾನೆ ಉಪ್ಪಿನಂಗಡಿಯ ‘ರೂಯಿನ್’ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದರು. ಆದರೆ, ಸಂಜೆಯಾದರೂ ಮನೆಗೆ ವಾಪಸ್ ಬಾರದೇ ಕಾಣೆಯಾಗಿದ್ದಾರೆ. ಈ ಕುರಿತು ಕುಟುಂಬಸ್ಥರು ನೀಡಿದ ದೂರಿನನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ. 91/2026 :ಕಲಂ 0.00 MP (ಗಂಡಸು ಕಾಣೆ) BNS-2023) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಕಾಣೆಯಾದ ವ್ಯಕ್ತಿಯ ಚಹರೆ ವಿವರಗಳು:
- ಎತ್ತರ: 5 ಅಡಿ
- ಮೈ ಬಣ್ಣ: ಬಿಳಿ
- ಮೈಕಟ್ಟು: ಸಾಧಾರಣ
- ಮಾತನಾಡುವ ಭಾಷೆ: ತುಳು, ಕನ್ನಡ, ಮಲಯಾಳಂ ಮತ್ತು ಬ್ಯಾರಿ
- ಧರಿಸಿದ್ದ ಬಟ್ಟೆ: ಕ್ರೀಮ್ ಬಣ್ಣದ ಗ್ರೇ ಬಣ್ಣದ ಗೆರೆಗಳಿರುವ ಟಿ-ಶರ್ಟ್ ಹಾಗೂ ಗ್ರೇ ಬಣ್ಣದ ಪ್ಯಾಂಟ್.
ಭಾವಚಿತ್ರ ಹಾಗೂ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿ ಎಲ್ಲೇ ಕಂಡುಬಂದರೂ ತಕ್ಷಣವೇ ಕಡಬ ಪೊಲೀಸ್ ಠಾಣೆಗೆ (ಮೊಬೈಲ್ ಸಂಖ್ಯೆ: 9480805364) ಮಾಹಿತಿ ನೀಡಿ ಪತ್ತೆಗೆ ಸಹಕರಿಸಬೇಕಾಗಿ ಕಡಬ ಪೊಲೀಸ್ ಠಾಣಾಧಿಕಾರಿಗಳು ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಕೋರಿದ್ದಾರೆ.
