ಕಡಬ: ರೈಲ್ವೆ ಇಲಾಖೆಯ ವಿಶ್ರಾಂತ ಮೆಸ್ತ್ರಿ ಮೋನಪ್ಪ ಗೌಡ ಕೊಲ್ಪೆ ನಿಧನ

kadaba times

ಕಡಬ:  ರೈಲ್ವೆ ಇಲಾಖೆಯಲ್ಲಿ ಸುದೀರ್ಘ 35 ವರ್ಷಗಳ ಕಾಲ ಮೆಸ್ತ್ರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಕೋಡಿಂಬಾಳ ಗ್ರಾಮದ ಕೊಲ್ಪೆ ಮನೆ ನಿವಾಸಿ ಮೋನಪ್ಪ ಗೌಡ ಅವರು ಜುಲೈ 30 ರಂದು ಇಹಲೋಕ ತ್ಯಜಿಸಿದ್ದಾರೆ.

kadaba times
uniq

ಇವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಮೆಸ್ತ್ರಿಯಾಗಿ ಸೇವೆ ಸಲ್ಲಿಸಿ, ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದರು.

kadaba times
kadaba times

ನಿವೃತ್ತಿಯ ನಂತರ ತಮ್ಮ ಹುಟ್ಟೂರಾದ ಕೋಡಿಂಬಾಳದ ಕೊಲ್ಪೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೋನಪ್ಪ ಗೌಡ ಅವರ ನಿಧನಕ್ಕೆ  ಬಂಧು-ಮಿತ್ರರು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರು ಅಪಾರ ಬಂಧು-ಬಳಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

Related Articles

Latest Articles