ಮುಳಿಮಜಲು ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ; ಮೂವರಿಗೆ ಗಾಯ, ಕೇಸ್ ದಾಖಲು

kadaba times

ಕಡಬ: ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿರುವ ಘಟನೆ ಜೂನ್ 14 ರಂದು ಸಂಜೆ ನಡೆದಿದೆ. ಅಪಘಾತದ ತೀವ್ರತೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

kadaba times
uniq

ನೂಜಿಬಾಳ್ತಿಲ ಗ್ರಾಮದ ಪಾಡ್ಲ ನಿವಾಸಿ ಅಗಸ್ಟಿನ್ ಅವರ ಪುತ್ರ ಶಿಂಜು (23) ಎಂಬವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 14ರಂದು ಸಂಜೆ ಶಿಂಜು ಅವರು ತಮ್ಮ ಗೆಳೆಯ ಬಿಬಿನ್ ಎಂಬವರ ಮಾಲೀಕತ್ವದ ಸ್ಪ್ಲೆಂಡರ್ ಬೈಕ್  ಚಲಾಯಿಸುತ್ತಿದ್ದರು. ಬಿಬಿನ್ ಸಹಸವಾರನಾಗಿ ಕುಳಿತಿದ್ದರು. ಇವರಿಬ್ಬರೂ ಕಲ್ಲುಗುಡ್ಡೆಯಿಂದ ಕಾಸರಗೋಡಿಗೆ ಹೋಗುವ ಸಲುವಾಗಿ ಸಂಜೆ  ಕಡಬ ಮಾರ್ಗವಾಗಿ ಮುಳಿಮಜಲು ತಲುಪಿದ್ದರು.

ಈ ವೇಳೆ ಕಡಬ ಕಡೆಯಿಂದ ಎದುರಾಗಿ ಬಂದ ಮತ್ತೊಂದು ದ್ವಿಚಕ್ರ ವಾಹನದಸವಾರ ರಶೀದ್ ಎಂಬಾತ ತನ್ನ ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ. ರಸ್ತೆಯ ತೀರಾ ಬಲಬದಿಗೆ ಬಂದು ಒಮ್ಮೆಗೇ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಶಿಂಜು ಅವರು ಚಲಾಯಿಸುತ್ತಿದ್ದ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.

kadaba times
kadaba times
ಮೂವರಿಗೂ ಗಾಯ: ವೆನ್‌ಲಾಕ್‌ಗೆ ದಾಖಲು

ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ಜಖಂಗೊಂಡಿದ್ದು, ರಸ್ತೆಗೆ ಬಿದ್ದ ಮೂವರಿಗೂ ಗಾಯಗಳಾಗಿವೆ. ದೂರುದಾರ ಶಿಂಜು ಅವರ ಬಲಕೈ ಮಧ್ಯದ ಬೆರಳು ಹಾಗೂ ಮೊಣಗಂಟಿಗೆ ರಕ್ತಗಾಯವಾಗಿದ್ದರೆ, ಸಹಸವಾರ ಬಿಬಿನ್ ಮುಖದ ಬಲಬದಿಗೆ ಪೆಟ್ಟಾಗಿದೆ. ಇನ್ನು ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ರಶೀದ್ ಎಂಬಾತನ ತಲೆಯ ಬಲಬದಿಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ.

ಸಕಾಲದಲ್ಲಿ ಸ್ಪಂದಿಸಿದ ಸ್ಥಳೀಯರು: ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ, ರಿಕ್ಷಾ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 281 (ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕ ಚಾಲನೆ) ಮತ್ತು 125(a) (ಇತರರ ಜೀವಕ್ಕೆ ಅಪಾಯ ತರುವುದು) ಅಡಿಯಲ್ಲಿ ಬೈಕ್ ಸವಾರ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles