ಎಕ್ಸೆಲ್ ಪಿಯು ಕಾಲೇಜು ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ: ಮಾನ್ಯತೆ ರದ್ದಾಗಿಲ್ಲ, ಇಲ್ಲಿದೆ ಅಸಲಿ ಸತ್ಯ!

kadaba times

ಕೆಲವು ದೃಶ್ಯ ಮಾಧ್ಯಮ ಹಾಗೂ ನ್ಯೂಸ್ ಚಾನೆಲ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ‘ಎಕ್ಸೆಲ್ ಪಿಯು ಕಾಲೇಜು’ (Excel P.U. College) ಕುರಿತು ಬಿತ್ತರವಾಗುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

kadaba times
uniq

ಕಾಲೇಜಿನ ಅಧಿಕೃತ ಮತ್ತು ಸಕ್ರಿಯ ಕಾಲೇಜು ಕೋಡ್ SS0351 ಆಗಿದೆ. ಈ ಕೋಡ್ ಅಡಿಯಲ್ಲಿಯೇ ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳ ದಾಖಲಾತಿಯನ್ನು ಕಾನೂನುಬದ್ಧವಾಗಿ ಮಾಡಿಕೊಂಡಿದೆ.

 

ಅಸಲಿ ಸತ್ಯವೇನು? (Fact Check): ಕೆಲವು ಮಾಧ್ಯಮಗಳಲ್ಲಿ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದಾಗಿದೆ ಎಂದು ಬಿತ್ತರಿಸಲಾದ ಸುದ್ದಿಯಲ್ಲಿದ್ದ ಕಾಲೇಜು ಕೋಡ್ SS0376 ಆಗಿದೆ. ಆದರೆ, ಈ ಕೋಡ್ ಅನ್ನು ಸ್ವತಃ ಎಕ್ಸೆಲ್ ಶಿಕ್ಷಣ ಸಂಸ್ಥೆಯವರೇ ಕಳೆದ ವರ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರದ್ದುಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸ್ವಯಂಪ್ರೇರಿತರಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಅದರಂತೆ ಆ ಕೋಡ್ ರದ್ದಾಗಿದೆಯೇ ಹೊರತು ಪ್ರಸ್ತುತ ಕಾಲೇಜು ನಡೆಯುತ್ತಿರುವ ಮುಖ್ಯ ಕೋಡ್‌ಗೆ ಯಾವುದೇ ಸಮಸ್ಯೆಯಾಗಿಲ್ಲ.

kadaba times
kadaba times

ರದ್ದಾಗಿರುವ ಕೋಡ್ (SS0376) ಅಡಿಯಲ್ಲಿ ಸಂಸ್ಥೆಯು ಯಾವುದೇ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿಕೊಂಡಿರುವುದಿಲ್ಲ. ಪ್ರಸ್ತುತ ಕಾಲೇಜು ಸುಸೂತ್ರವಾಗಿ ನಡೆಯುತ್ತಿದ್ದು, ಸರ್ಕಾರದ ಎಲ್ಲಾ ನಿಯಮಾವಳಿಗಳ ಪ್ರಕಾರ ಮಾನ್ಯತೆ ಪಡೆದಿದೆ.

 

ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮನವಿ: ವಿದ್ಯಾರ್ಥಿಗಳು ತಾವು ಯಾವ ಕಾಲೇಜು ಕೋಡ್‌ನಲ್ಲಿ ಅಡ್ಮಿಷನ್ ಆಗಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾಲೇಜಿನ ಮಾನ್ಯತೆಯ ನೈಜತೆಯನ್ನು ಅರಿಯಲು ವಿದ್ಯಾರ್ಥಿಗಳ ‘ಸ್ಯಾಟ್ಸ್’ (SATS) ಸಂಖ್ಯೆಯ ಮೂಲಕ ಡಿಡಿಪಿಯು (DDPU) ಕಚೇರಿ ಅಥವಾ ರಾಜ್ಯದ ಯಾವುದೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಿ ನೇರವಾಗಿ ಮಾಹಿತಿ ಪಡೆದುಕೊಳ್ಳಬಹುದು. ಮಾಧ್ಯಮಗಳಲ್ಲಿ ಬರುವ ಅಪೂರ್ಣ ಹಾಗೂ ದಾರಿ ತಪ್ಪಿಸುವ ಸುದ್ದಿಗಳನ್ನ ನಂಬಿ ಆತಂಕ ಪಡಬಾರದು ಎಂದು ಕಾಲೇಜು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.

Related Articles

Latest Articles