ಕಡಬ: ನಗುನಗುತ್ತಾ ಹೋದ ಬಾಲಕಿಯರು ಹೆತ್ತವರ ಮಡಿಲಿಗೆ ಶವವಾಗಿ ಮರಳಿದರು!

ಭವಿಷ್ಯದ ಕನಸುಗಳು ನೀರುಪಾಲು:ಪೋಷಕರೇ, ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ

kadaba times

ರಜೆಯ ದಿನಗಳಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಮಕ್ಕಳ ಹಕ್ಕು. ಆದರೆ, ಆ ಸಂಭ್ರಮವೇ ಇಂದು ಅವರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಮುಂದೆ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದ್ದ ಈ ಬಾಲೆಯರು, ಕ್ಷಣಾರ್ಧದ ಅಜಾಗರೂಕತೆಯಿಂದ ನದಿ ಪಾಲಾಗಿದ್ದಾರೆ. ಅಕ್ಕಪಕ್ಕದವರೂ ರಕ್ಷಿಸಲು ಪ್ರಯತ್ನಿಸಿದರೂ ವಿಧಿಯ ಆಟದ ಮುಂದೆ ಯಾರೂ ಸಾಟಿಯಾಗಲಿಲ್ಲ.

kadaba times
uniq

ಬೇಸಿಗೆ ರಜೆಯ ಮೋಜಿನಲ್ಲಿದ್ದ ಆ ಮಕ್ಕಳು ಕಂಡಿದ್ದ ಭವಿಷ್ಯದ ಕನಸುಗಳು ನದಿಯ ಅಲೆಗಳಲ್ಲಿ ಅಸ್ತಮಿಸಿವೆ. ಆಟವಾಡುತ್ತಾ ನಗುನಗುತ್ತಾ ಹೋದ ಬಾಲಕಿಯರು ಇಂದು ಹೆತ್ತವರ ಮಡಿಲಿಗೆ ಕೇವಲ ಶವವಾಗಿ ಮರಳಿರುವುದು ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಸ್ನಾನಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನ ಆಳ ಅರಿಯದೆ ಮುಳುಗಿ ಮೃತಪಟ್ಟ ಘಟನೆ ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಅರ್ಪಿತಾ (15) ಮತ್ತು ಸುನೀತಾ (21) ಎಂದು ಗುರುತಿಸಲಾಗಿದೆ. ಈ ಕುರಿತು ಮೃತ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲಭ್ಯವಿರುವ ಮಾಹಿತಿಯಂತೆ, ಮೇ 8ರಂದು ಮಧ್ಯಾಹ್ನ ಅರ್ಪಿತಾ, ಸುನೀತಾ, ಅಕ್ಷತಾ ಹಾಗೂ ನೆಟ್ಟಣದ ಶ್ರೇಯಾ ಸೇರಿದಂತೆ ಗೆಳೆಯರ ಬಳಗವು ಕೊಲ್ಯದಕಟ್ಟದ ಗುಂಡ್ಯ ಹೊಳೆಗೆ ಸ್ನಾನಕ್ಕೆಂದು ತೆರಳಿತ್ತು. ಸಂಜೆ ಸುಮಾರು 4:30ರ ವೇಳೆಗೆ ನದಿಯಲ್ಲಿ ಈಜಾಡುತ್ತಿದ್ದಾಗ, ಅರ್ಪಿತಾ ಮತ್ತು ಸುನೀತಾ ಅನಿರೀಕ್ಷಿತವಾಗಿ ನೀರಿನ ಆಳಕ್ಕೆ ಸಿಲುಕಿ ಮುಳುಗತೊಡಗಿದ್ದಾರೆ. ಜೊತೆಯಲ್ಲಿದ್ದವರು ಇಬ್ಬರನ್ನೂ ರಕ್ಷಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ತಕ್ಷಣ ಸ್ಥಳೀಯ ನಿವಾಸಿ ಜಾರ್ಜ್ ಎಂಬುವವರು ನೀರಿನಲ್ಲಿ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

kadaba times
kadaba times

ಕುಟ್ರುಪ್ಪಾಡಿ ಭಾಗದ ಈ ಜಲಮೂಲ ಈ ಹಿಂದೆಯೂ ಇಂತಹ ಘಟನೆಗೆ ಸಾಕ್ಷಿಯಾಗಿತ್ತು. ಇಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಸಿಲುಕಿ ಮೃತಪಟ್ಟ ಕಹಿ ನೆನಪು ಗ್ರಾಮಸ್ಥರಲ್ಲಿ ಇಂದಿಗೂ ಹಸಿರಾಗಿದೆ. ಇದೀಗ ಮುಂದಿನ ಭವಿಷ್ಯದ ಕನಸು ಹೊತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಕುಟುಂಬಸ್ಥರು ದೂರಿನಲ್ಲಿ ಸ್ಪಷ್ಟಪಡಿಸಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಜೆಯ ದಿನಗಳಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಮಕ್ಕಳ ಹಕ್ಕು. ಆದರೆ, ಆ ಸಂಭ್ರಮವೇ ಇಂದು ಅವರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಮುಂದೆ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದ್ದ ಈ ಬಾಲೆಯರು, ಕ್ಷಣಾರ್ಧದ ಅಜಾಗರೂಕತೆಯಿಂದ ನದಿ ಪಾಲಾಗಿದ್ದಾರೆ. ಅಕ್ಕಪಕ್ಕದವರೂ ರಕ್ಷಿಸಲು ಪ್ರಯತ್ನಿಸಿದರೂ ವಿಧಿಯ ಆಟದ ಮುಂದೆ ಯಾರೂ ಸಾಟಿಯಾಗಲಿಲ್ಲ.

ಪೋಷಕರೇ, ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ

ಮಳೆಗಾಲದ ಆರಂಭ ಅಥವಾ ಬೇಸಿಗೆಯ ಈ ಸಮಯದಲ್ಲಿ ನದಿಗಳು ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಒಳಸುಳಿಗಳು ಅಪಾಯಕಾರಿಯಾಗಿರುತ್ತವೆ. ಈ ಘಟನೆ ಪ್ರತಿಯೊಬ್ಬ ಪೋಷಕರಿಗೂ ಒಂದು ಪಾಠವಾಗಿದೆ.. ಮಕ್ಕಳು ಏಕಾಂಗಿಯಾಗಿ ನದಿ, ಕೆರೆ ಅಥವಾ ಕುಂಟೆಗಳ ಬಳಿ ತೆರಳದಂತೆ ಎಚ್ಚರಿಕೆ ವಹಿಸಿ.ಅಪಾಯಕಾರಿ ಸ್ಥಳಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ರಜೆಯ ಮೋಜಿನ ನಡುವೆಯೂ ಮಕ್ಕಳ ಚಲನವಲನದ ಮೇಲೆ ಸದಾ ನಿಗಾ ಇಡಿ.

Related Articles

Latest Articles