ಕುಂತೂರು ಬಳಿ ಹಾಲಿನ ಡೈರಿಗೆ ಬಂದು ಹೋಗುತ್ತಿದ್ದ ಸ್ಕೂಟಿ ಸವಾರನಿಗೆ ಲಾರಿ ಡಿಕ್ಕಿ: ಚಾಲಕನ ವಿರುದ್ದ FIR ದಾಖಲು

kadaba times

ಕಡಬ ತಾಲೂಕಿನ ಕುಂತೂರು ಎಂಬಲ್ಲಿ ಲಾರಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಡಿಪ್ಲೋಮಾ ವಿದ್ಯಾರ್ಥಿ ಜಗತ್ ಎ ಎಸ್ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

kadaba times
uniq

ಕಡಬ: ಹಾಲಿನ ಡೈರಿಗೆ ಹಾಲು ಹಾಕಿ ಮನೆಗೆ ಮರಳುತ್ತಿದ್ದ ಸ್ಕೂಟಿ ಸವಾರನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಭದ್ರಿಯಾ ಹಾರ್ಡ್‌ವೇರ್ ಬಳಿ ಸಂಭವಿಸಿದೆ.

ಕುಂತೂರು ಗ್ರಾಮದ ಅನ್ನಡ್ಕ ನಿವಾಸಿ ಜಗತ್ ಎ ಎಸ್ (20) ಗಾಯಗೊಂಡ ಸವಾರ. ಮಂಗಳೂರಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಜಗತ್ ಅವರು ಸದ್ಯ ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ಎಪ್ರಿಲ್ 29ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ತಮ್ಮ ಸ್ಕೂಟಿ ಯಲ್ಲಿ ಕುಂತೂರಿನ ಡೈರಿಗೆ ಹಾಲು ಹಾಕಲು ತೆರಳಿದ್ದರು.

kadaba times
kadaba times

ಹಾಲು ಹಾಕಿ ಮರಳಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ಹೆದ್ದಾರಿಯಾಗಿ ಮನೆಗೆ ಹೋಗುತ್ತಿದ್ದಾಗ, ಕುಂತೂರಿನ ಭದ್ರಿಯಾ ಹಾರ್ಡ್‌ವೇರ್ ಶಾಪ್ ಬಳಿ ನಿಂತಿದ್ದ ಲಾರಿ  ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿ ವಾಹನವನ್ನು ಚಲಾಯಿಸಿದ್ದಾನೆ. ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಲಾರಿಯನ್ನು ಒಮ್ಮೆಗೆ ಬಲಕ್ಕೆ ಅಂದರೆ ರಾಜ್ಯ ಹೆದ್ದಾರಿಯ ಕಡೆಗೆ ತಿರುಗಿಸಿದ ಪರಿಣಾಮ, ಲಾರಿಯ ಮುಂಭಾಗದ ಚಕ್ರವು ಸ್ಕೂಟಿಗೆ ತಾಗಿದೆ.

 ಈ ಅಪಘಾತದ ಭರಕ್ಕೆ ಜಗತ್ ಅವರು ಸ್ಕೂಟಿಯೊಂದಿಗೆ ರಸ್ತೆಗೆ ಬಿದ್ದಿದ್ದು, ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಜಗತ್ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಅಪರಾಧ ಕ್ರಮಾಂಕ 54/2026, ಕಲಂ: 281, 125(a) BNS-2023 ರಂತೆ ಪ್ರಕರಣ ದಾಖಲಾಗಿದೆ.

Related Articles

Latest Articles