ಕಡಬ: ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 60 ವರ್ಷದ ವೃದ್ಧ

kadaba times

ನೂಜಿಬಾಳ್ತಿಲ: ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ವೃದ್ಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

kadaba times
uniq

ಮೃತರನ್ನು ಕೊಣಾಜೆ ಗ್ರಾಮದ ಬನಾರಿ ನಿವಾಸಿ ಚೆನ್ನಪ್ಪ  ಪೂಜಾರಿ(  60 ವರ್ಷ)ಎಂದು ಗುರುತಿಸಲಾಗಿದೆ.

ಕಡಬದ ನೂಜಿಬಾಳ್ತಿಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರು ಮೂಲತಃ ಕೊಣಾಜೆ ನಿವಾಸಿ. ಇವರಿಗೆ ಮದ್ಯಪಾನದ ಚಟವಿತ್ತು ಎಂದು ತಿಳಿದುಬಂದಿದೆ. ಮೇ 1 ರಂದು ಬೆಳಗ್ಗೆ 11.40ರ ಸುಮಾರಿಗೆ ಚೆನ್ನಪ್ಪ ಅವರು ವಾಸವಿದ್ದ ಮನೆಯ ಮಾಲೀಕರು, ಅವರ ಮಗ ರವಿಚಂದ್ರ ಬಿ. ಅವರಿಗೆ ಕರೆ ಮಾಡಿ, ಚನ್ನಪ್ಪ ಅವರು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಕ್ಷಣ ಮಗ ರವಿಚಂದ್ರ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

kadaba times
kadaba times

ಚೀಟಿ ಪತ್ತೆ: ಕುಟುಂಬ ಮೂಲಗಳ ಪ್ರಕಾರ ಮೃತರ ಅಂಗಿ ಕಿಸೆಯಲ್ಲಿ  ಬಳಿ ಚೀಟಿ ಸಿಕ್ಕಿದ್ದು ಅದರಲ್ಲಿ ಇಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಚೀಟಿಯನ್ನು ಪೊಲೀಸರು ಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು  ಅದರ ಸತ್ಯಾಸತ್ಯತೆ ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಿದೆ.

 ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ನಂಬರ್: 17/2026, ಕಲಂ: 194 BNSS-2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Related Articles

Latest Articles