ಕಡಬದಲ್ಲಿ ಭಾರೀ ಗಾಳಿ-ಮಳೆ: ಮುರಿದು ಬಿದ್ದ 33ಕೆವಿ ಕಂಬಗಳು , ಹಲವು ಗ್ರಾಮಗಳಲ್ಲಿ ಇಂದು ರಾತ್ರಿ ಪೂರ್ತಿ ಕರೆಂಟ್ ಇರಲ್ಲ!

kadaba times

ಕಡಬ ತಾಲೂಕಿನ ಪೆರಾಬೆ ಕುಂತೂರು ಬಳಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದಿವೆ. ಕಡಬ, ಮರ್ಧಾಳ ಸೇರಿದಂತೆ ಹಲವು ಭಾಗಗಳಲ್ಲಿ ಇಂದು ರಾತ್ರಿ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ

kadaba times
uniq

ಕಡಬ: ಕಡಬ ತಾಲೂಕಿನಾದ್ಯಂತ ಇಂದು ಸಂಜೆ ಗುಡುಗು ಸಹಿತ ಭಾರೀ ಗಾಳಿ-ಮಳೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ತೀವ್ರತೆಗೆ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದ್ದು, ಕಡಬ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೋಚಕಟ್ಟೆಯಲ್ಲಿ ಹಾನಿ: ಮುರಿದು ಬಿದ್ದ 33ಕೆವಿ ಕಂಬಗಳು

ಪೆರಾಬೆ ಗ್ರಾಮದ ಕುಂತೂರು ಸಮೀಪದ ಕೋಚಕಟ್ಟೆ ಎಂಬಲ್ಲಿ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ 33ಕೆವಿ ಸಾಮರ್ಥ್ಯದ 2 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸುಮಾರು 4 ಸ್ಪನ್ ಲೈನ್ ವೈರ್‌ಗಳು ನೆಲಸಮವಾಗಿವೆ . ಮುಖ್ಯ ಲೈನ್‌ಗೆ ಹಾನಿಯಾಗಿರುವುದರಿಂದ ಕಡಬ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

kadaba times
kadaba times

ಮೆಸ್ಕಾಂ ಇಲಾಖೆಯ ಮಾಹಿತಿಯಂತೆ, ಹಾನಿಗೊಳಗಾದ ವಿದ್ಯುತ್ ಲೈನ್‌ಗಳ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಈ ಕೆಳಗಿನ ಪ್ರದೇಶಗಳಲ್ಲಿ ಇಂದು ತಡರಾತ್ರಿಯವರೆಗೆ ವಿದ್ಯುತ್ ಇರುವುದಿಲ್ಲ: ಇಂದು (ಏ.16) ಸಂಜೆ 05:30 ರಿಂದ ನಾಳೆ (ಏ.17) ಬೆಳಿಗ್ಗೆ 01:00 ಗಂಟೆಯವರೆಗೆ ಕಡಬ ಪಟ್ಟಣ, ಕಲ್ಲುಗುಡ್ಡೆ, ಮರ್ಧಾಳ ಪಂಚಾಯತ್ ವ್ಯಾಪ್ತಿ, ಹೊಸ್ಮಠ ಪ್ರದೇಶ, ಕುಟ್ರುಪಾಡಿ ಮತ್ತು ಕೊಡಿಂಬಾಳ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಅನಿರೀಕ್ಷಿತವಾಗಿ ಎದುರಾಗಿರುವ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಮೆಸ್ಕಾಂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆಯ ಮುನ್ಸೂಚನೆ ಇರುವುದರಿಂದ ದುರಸ್ತಿ ಕಾರ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related Articles

Latest Articles