ಭಾರತೀಯ ಸೇನೆಯಲ್ಲಿ 22 ವರ್ಷಗಳ ಸಾರ್ಥಕ ಸೇವೆ

ಕ್ರೀಡಾಂಗಣದಿಂದ ರಣಾಂಗಣದವರೆಗೆ: ಒಂದು ಸ್ಫೂರ್ತಿದಾಯಕ ಪಯಣ

kadaba times

ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಮನೆ ಭಾಸ್ಕರ ಅವರು ಭಾರತೀಯ ಭೂಸೇನೆಯಲ್ಲಿ 22 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸ್ಫೂರ್ತಿದಾಯಕ ಪಯಣದ ಮಾಹಿತಿ ಇಲ್ಲಿದೆ.

kadaba times
uniq

ಸುಬ್ರಹ್ಮಣ್ಯ: ದೇಶದ ಗಡಿ ಕಾಯುವ ಪವಿತ್ರ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಪ್ರತಿಮ ದೇಶಪ್ರೇಮ ಮೆರೆದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಮನೆಯ ಭಾಸ್ಕರ ಅವರು ಮಾದರಿ ಸೇವೆಯ ನಂತರ ಮಾರ್ಚ್ 30ರಂದು ಭಾರತೀಯ ಭೂಸೇನೆಯಿಂದ ನಿವೃತ್ತಿ ಹೊಂದಿದ್ದಾರೆ.

ಕ್ರೀಡಾಂಗಣದಿಂದ ರಣಾಂಗಣದವರೆಗೆ: ಒಂದು ಸ್ಫೂರ್ತಿದಾಯಕ ಪಯಣ

2002ರ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಭಾಸ್ಕರ ಅವರು ತಮ್ಮ ಛಲ ಮತ್ತು ಶಿಸ್ತಿನ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾದರು. ಆರಂಭದಲ್ಲಿ CFN (Craftsman) ಹುದ್ದೆಗೆ ಸೇರಿದ ಇವರು, ತಮ್ಮ ದಕ್ಷತೆ ಮತ್ತು ಕೌಶಲ್ಯದ ಆಧಾರದ ಮೇಲೆ ಹವಾಲ್ದಾರ್ ಹುದ್ದೆಗೆ ಬಡ್ತಿ ಪಡೆದರು.

ತಮ್ಮ 22 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಭಾಸ್ಕರ ಅವರು ದೇಶದ ವಿವಿಧ ಭೌಗೋಳಿಕ ಪ್ರದೇಶಗಳಾದ  ಕಾರ್ಗಿಲ್, ಶ್ರೀನಗರ, ಜಮ್ಮು ಕಾಶ್ಮೀರದ ಕುಪ್ವಾರಾ ಹೀಗೆ  ಕಠಿಣ ಪ್ರದೇಶಗಳಲ್ಲಿ ಜೊತೆಗೆ್ ಭೋಪಾಲ್ (3 EME Center), ಅಂಬಾಲಾ, ಜಬಲ್ಪುರ, ಪಶ್ಚಿಮ ಬಂಗಾಳದ ಸುಖ್ನಾ, ಪ್ರಯಾಗರಾಜ್, ಪಂಜಾಬ್‌ನ ಪಟಿಯಾಲಾ, ಪುಣೆ, ಮಹಾರಾಷ್ಟ್ರದ ಖಡ್ಕಿ ಮತ್ತು ಸೆಕಂದರಾಬಾದ್ ಪ್ರಮುಖ ಕೇಂದ್ರಗಳಲ್ಲಿ   ಕರ್ತವ್ಯ ನಿರ್ವಹಿಸಿದ್ದಾರೆ.

ಸೇನೆಯ ವಿವಿಧ ವಿಭಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿಭಾಯಿಸಿದ ಇವರು, ಕಿರಿಯ ಸೈನಿಕರಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

kadaba times
kadaba times
ಹಿನ್ನೆಲೆ ಮತ್ತು ವಿದ್ಯಾಭ್ಯಾಸ

ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಚೆನ್ನಪ್ಪ ಹಾಗೂ ಪದ್ಮಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿರುವ ಭಾಸ್ಕರ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮವಾದ ಹರಿಹರ ಪಲ್ಲತ್ತಡ್ಕದಲ್ಲೇ ಪೂರ್ಣಗೊಳಿಸಿ, ನಂತರ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಜೆಒಸಿ ಶಿಕ್ಷಣ ಪಡೆದಿದ್ದರು.

ಭಾಸ್ಕರ ಅವರ ಸಾಧನೆಯ ಹಿಂದೆ ಅವರ ಕುಟುಂಬದ ಬೆಂಬಲವೂ ಹಿರಿದು. ಇವರ ಪತ್ನಿ ಭಾರತಿ ಪಿ. ಅವರು ಸುಳ್ಯದ ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ಇಬ್ಬರು ಪುತ್ರರಾದ ದಿಶಾನ್ (5ನೇ ತರಗತಿ) ಮತ್ತು ದಿವಾನ್ (2ನೇ ತರಗತಿ) ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

“ದೇಶಸೇವೆಯೇ ಈಶ ಸೇವೆ ಎಂಬ ಧ್ಯೇಯದೊಂದಿಗೆ ಎರಡು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸಾರ್ಥಕ ಬದುಕು ಸವೆಸಿ ತಾಯ್ನಾಡಿಗೆ ಮರಳುತ್ತಿರುವ ಭಾಸ್ಕರ ಅವರಿಗೆ ಗ್ರಾಮಸ್ಥರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಈ ಸಾಧನೆ ಮುಂದಿನ ಪೀಳಿಗೆಯ ಯುವಕರಿಗೆ ಸೇನೆಗೆ ಸೇರಲು ದೊಡ್ಡ ಪ್ರೇರಣೆಯಾಗಿದೆ.”

Related Articles

Latest Articles