
ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ಶಿವಧ್ವಜ್ ಅವರು ಪ್ರಸಿದ್ಧ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಭೇಟಿಯ ಪೂರ್ಣ ವಿವರ ಇಲ್ಲಿದೆ.


ಕಡಬ: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ಯಶಸ್ವಿ ನಿರ್ದೇಶಕ ಶಿವಧ್ವಜ್ ಅವರು ಇತ್ತೀಚೆಗೆ ಸುಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಸ್ಥಾನಕ್ಕೆ ಆಗಮಿಸಿದ ಶಿವಧ್ವಜ್ ಅವರನ್ನು ದೇವಸ್ಥಾನದ ಮಂಡಳಿಯವರು ಆತ್ಮೀಯವಾಗಿ ಬರಮಾಡಿಕೊಂಡರು. ಅಮ್ಮನವರ ಸನ್ನಿಧಿಯಲ್ಲಿ ಕುಳಿತು ವಿಶೇಷ ಅರ್ಚನೆ ಹಾಗೂ ಪೂಜೆ ಸಲ್ಲಿಸಿದ ಅವರು, ಲೋಕ ಕಲ್ಯಾಣಕ್ಕಾಗಿ ಮತ್ತು ಕನ್ನಡ ಚಿತ್ರರಂಗದ ಏಳಿಗೆಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಅವರಿಗೆ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.


ಮಾಧ್ಯಮದವರ ಜೊತೆ ಮಾತನಾಡಿದ ಅವರು “ದೇವಿಯ ದರ್ಶನದಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ತಾಯಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ನೆಚ್ಚಿನ ನಟ ದೇವಸ್ಥಾನಕ್ಕೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದರು . ಅಭಿಮಾನಿಗಳೊಂದಿಗೆ ಕಿರು ಸಂಭಾಷಣೆ ನಡೆಸಿ, ಫೋಟೋಗಳಿಗೆ ಪೋಸ್ ನೀಡುವ ಮೂಲಕ ಶಿವಧ್ವಜ್ ತಮ್ಮ ಸರಳತೆಯನ್ನು ಮೆರೆದರು.
