ಆಟೋ ಗ್ಯಾಸ್ ಬಂಕ್ ಮೇಲೆ ಪೊಲೀಸರ ದಿಢೀರ್ ದಾಳಿ – ಅಕ್ರಮ ರೀಫಿಲ್ಲಿಂಗ್ ಪತ್ತೆ

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಪತ್ತೆಯಾದರೂ ದಾಖಲಾಗದ ಕೇಸ್

kadaba times

ವಿಟ್ಲದ ಎಜೀಸ್ ಗ್ಯಾಸ್ ಬಂಕ್ ಅಕ್ರಮ ಪತ್ತೆಯಾಗಿ ಪೊಲೀಸರು ಮಾಹಿತಿ ನೀಡಿದರೂ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅಧಿಕಾರಿಗಳ ಮೌನದ ಹಿಂದೆ ದೊಡ್ಡ ಕೈಗಳಿರುವ ಶಂಕೆ.

kadaba times
uniq

ವಿಟ್ಲ: ಬೊಬ್ಬೆಕ್ಕೇರಿಯ  ಆಟೋ ಎಲ್‌ಪಿಜಿ ಪಂಪ್‌ನಲ್ಲಿ ನಡೆಯುತ್ತಿದ್ದ ಅಕ್ರಮ ಕಮರ್ಷಿಯಲ್ ಸಿಲಿಂಡರ್ ರೀಫಿಲ್ಲಿಂಗ್ ದಂಧೆಯನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿದ್ದರೂ, ಈವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕರಣ (FIR) ದಾಖಲಾಗಿಲ್ಲ. ಇದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮತ್ತು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಕಡಂಬು ಬಳಿ ಗೋಡೌನ್ ಹೊಂದಿರುವ ಈ ಏಜೆನ್ಸಿಯು, ಸರಕಾರಿ ದರಕ್ಕಿಂತ ದುಪ್ಪಟ್ಟು  ದರದಲ್ಲಿ ಹೋಟೆಲ್ ಹಾಗೂ ಮನೆಗಳಿಗೆ ಅಕ್ರಮವಾಗಿ ಸಿಲಿಂಡರ್ ಪೂರೈಸುತ್ತಿತ್ತು. ತಡರಾತ್ರಿ ಪಂಪ್ ಮೂಲಕ ಸಿಲಿಂಡರ್‌ಗೆ ಗ್ಯಾಸ್ ತುಂಬಿಸುವ ಅಪಾಯಕಾರಿ ಕೆಲಸದಲ್ಲಿ ನಿರತವಾಗಿದ್ದಾಗ ಪೊಲೀಸರು ದಾಳಿ ನಡೆಸಿದ್ದರು.

ಸಾಮಾನ್ಯವಾಗಿ ಇಂತಹ ಗಂಭೀರ ಸ್ವರೂಪದ ಅಕ್ರಮಗಳು ಪತ್ತೆಯಾದ ತಕ್ಷಣ ಕಾನೂನು ಕ್ರಮ ಜರುಗಬೇಕಿತ್ತು. ಆದರೆ ಪೊಲೀಸರು ತಹಶೀಲ್ದಾರರಿಗೆ ಮಾಹಿತಿ ನೀಡಿದರೂ ಆಹಾರ ಇಲಾಖೆಯ ವಿಳಂಬ ನೀತಿ ಎದ್ದುಕಾಣುತ್ತಿದೆ. ಘಟನೆ ನಡೆದು ಇಷ್ಟು ಸಮಯ ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಸ್ಥಳೀಯ ಪ್ರಭಾವಿಗಳು ಮತ್ತು ರಾಜಕೀಯ ವ್ಯಕ್ತಿಗಳುಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಶಂಕೆ ವ್ಯಕ್ತವಾಗಿದೆ.

kadaba times
kadaba times

ಸದ್ರಿ ಘಟನೆಯ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರಿಗೆ ವಿಟ್ಲ ಠಾಣಾ ಪೊಲೀಸರು ಮಾಹಿತಿ ನೀಡಿರುತ್ತಾರೆ. ತಾಲ್ಲೂಕು ಉಪತಹಶಿಲ್ದಾರರು ಹಾಗೂ ಆಹಾರ ನಿರೀಕ್ಷಕರು ಸದ್ರಿ ಗ್ಯಾಸ್ ಬಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕಾನೂನುಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ತಿಳಿಸಿರುತ್ತಾರೆ ಎಂದು ದ.ಕ ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ.

 

Related Articles

Latest Articles