ಶಿಬಾಜೆ ಶ್ರೀಧರ ಕೊ*ಲೆ ಪ್ರಕರಣದ ದೂರುದಾರ ಕೀಟನಾಶಕ ಸೇವಿಸಿ ಅಸ್ವಸ್ಥ: ಎಸ್‌ಐಟಿ ವಿಚಾರಣೆ ಬೆನ್ನಲ್ಲೇ ಘಟನೆ, ಎಸ್‌ಪಿ ಸ್ಪಷ್ಟನೆ

kadaba times

ಬೆಳ್ತಂಗಡಿಯ ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವಾಗಲೇ ದೂರುದಾರ ಹರೀಶ್ ಮುಗೇರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಸ್‌ಐಟಿ ವಿಚಾರಣೆಯ ಆತಂಕವೇ ಕಾರಣ ಎಂಬ ವದಂತಿಗಳಿಗೆ ಎಸ್‌ಪಿ ಸ್ಪಷ್ಟನೆ ನೀಡಿದ್ದಾರೆ

kadaba times
uniq

ಶಿಬಾಜೆಯ ಶ್ರೀಧರ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಕಾನೂನು ಹೋರಾಟ ಮಾಡಿದ್ದ ಶಿಬಾಜೆ ನಿವಾಸಿ ಹರೀಶ್ ‌ಮುಗೇರ ಅವರು ಮಾ. 11ರಂದು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ರಾಜ್ಯ ಸರಕಾರ ಶ್ರೀಧರ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ರಚಿಸಿ‌ ತನಿಖೆ ಆರಂಭಿಸಿದ್ದು, ದೂರುದಾರ ಹರೀಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸುದ್ದಿ ಹಬ್ಬಿತ್ತು‌. ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ವೈದ್ಯಕೀಯ ಸೂಚನಾ ಪತ್ರ ಬಂದ ಹಿನ್ನೆಲೆಯಲ್ಲಿ ಪೊಲೀಸರು ಹರೀಶ್ ಅವರನ್ನು ವಿಚಾರಿಸಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

kadaba times
kadaba times

ಮಾ. 11ರಂದು ರಾತ್ರಿ ವೇಳೆ ಮನೆಯಲ್ಲಿ ತಂದಿರಿಸಿದ್ದ ಮದ್ಯವೆಂದು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.ಘಟನೆಯ ಕುರಿತು ಹೆಚ್ಚಿನ ವಿಚಾರಣೆ ದೃಷ್ಟಿಯಿಂದ ಹರೀಶ್ ಅವರನ್ನು ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ ಪೊಲೀಸರು ಜಿಲ್ಲಾ ವೈದ್ಯಾಧಿಕಾರಿಗಳನ್ನು ವಿನಂತಿಸಿದ್ದಾರೆ. ಈ ವೇಳೆ ಅವರ ಹೇಳಿಕೆಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ

Related Articles

Latest Articles