ಕಡಬ:ಗ್ರಾಮೀಣ ಭಾಗದಲ್ಲಿ ಮತ್ತೆ ಶುರುವಾಯ್ತು ಕಟ್ಟಿಗೆ ಒಲೆಯ ಕಾಲ!

ಗ್ಯಾಸ್ ಸ್ಟೌವ್ ಮೇಲೆ ಸೌದೆ ಒಲೆ ಇಟ್ಟು ಆಹಾರ ಬೇಯಿಸುತ್ತಿರುವ ವೀಡಿಯೋ ವೈರಲ್!

kadaba times

ಕಡಬದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಅನಿವಾರ್ಯವಾಗಿ ಸೌದೆ ಮತ್ತು ಅಸ್ತ್ರ ಒಲೆಗಳನ್ನು ಬಳಸುತ್ತಿದ್ದಾರೆ ಮಾಲೀಕರು. ವಿವರವಾದ ವರದಿ ಇಲ್ಲಿದೆ.

kadaba times
uniq

ಕಡಬ: ಇಂದಿನ ಆಧುನಿಕ ಕಾಲದಲ್ಲಿ ಎಲ್ಲವೂ ಹೈಟೆಕ್ ಆಗುತ್ತಿದೆ ಎಂದು ನಾವು ಬೀಗುತ್ತಿದ್ದೇವೆ. ಆದರೆ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಮನುಷ್ಯ ಮತ್ತೆ ಹಳೆಯ ಪದ್ಧತಿಗೆ ಮರಳಲೇಬೇಕು ಎಂಬುವುದಕ್ಕೆ ಕಡಬದ ಹೋಟೆಲೊಂದರಲ್ಲಿ ಕಬ್ಬಿಣದ  ಗ್ಯಾಸ್  ಸ್ಟೌವ್  ಮೇಲೆ  ಸಣ್ಣ  ಸೌದೆ ಒಲೆಯನ್ನು ಇಟ್ಟು ಆಹಾರ ಬೇಯಿಸುತ್ತಿರುವ   ಪ್ರಸಕ್ತ ಸ್ಥಿತಿಯೇ ಸಾಕ್ಷಿಯಾಗಿದೆ.

ಕಡಬ ತಾಲೂಕಿನಾದ್ಯಂತ   ಎಲ್‌ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಗ್ರಾಮೀಣ ಭಾಗದ ಹೋಟೆಲ್ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ. ಕೆಲ ದಿನಗಳ ಹಿಂದೆ ಕಡಬ ಪಟ್ಟಣದ ಕೆಲವು ಹೋಟೆಲ್ ಗಳು ಬಂದ್ ಆಗಿದ್ದವು.

ಮತ್ತೆ ಶುರುವಾಯ್ತು ಕಟ್ಟಿಗೆ ಒಲೆಯ ಕಾಲ!

ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ಮಾಡಲು ಪರದಾಡುತ್ತಿರುವ ಹೋಟೆಲ್ ಮಾಲೀಕರು ಈಗ ಅನಿವಾರ್ಯವಾಗಿ ಸಾಂಪ್ರದಾಯಿಕ ಶೈಲಿಯ ಕಟ್ಟಿಗೆ ಒಲೆ ಹಾಗೂ ‘ಅಸ್ತ್ರ’ ಒಲೆಗಳ ಮೊರೆ ಹೋಗಿದ್ದಾರೆ. ಕಡಬದ ಕಳಾರದಲ್ಲಿರುವ  ಪುಟ್ಟ ಹೋಟೆಲೊಂದರಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿರುವ  ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಸಾಮಾನ್ಯರು ಇದನ್ನು ‘ಕಾಲಚಕ್ರ’ ಎಂದು ಬಣ್ಣಿಸುತ್ತಿದ್ದಾರೆ.

kadaba times
kadaba times

ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಲಭ್ಯತೆ ಕಡಿಮೆಯಾಗಿರುವುದರಿಂದ ಹೋಟೆಲ್ ಮಾಲೀಕರು ಉದ್ಯಮ ನಡೆಸಲು ಹರಸಾಹಸ ಪಡುತ್ತಿದ್ದಾರೆ. ತಳ್ಳುಗಾಡಿ, ಆಟೋಗಳಲ್ಲಿ ಆಹಾರ ಮಾರಾಟ ಮಾಡುವವರು ಸಂಕಷ್ಟಕ್ಕೆ ಒಳಗಾಗುಂತಾಗಿದೆ ಇನ್ನು ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್ ಸಿಗದೆ ಮೆನುವಿನಲ್ಲಿರುವ ಖಾದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ. ಗ್ಯಾಸ್ ಇಲ್ಲದ ಕಾರಣ ಸೌದೆಯನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರಿಗೆ ಈಗ ಸರಿಯಾದ ಸಮಯಕ್ಕೆ ಊಟ ಸಿಗದಂತಾಗಿದೆ. ಹೋಟೆಲ್‌ಗಳಲ್ಲಿ ಸೀಮಿತ ಪ್ರಮಾಣದ ಆಹಾರ ತಯಾರಿಸುತ್ತಿರುವುದರಿಂದ, ಜನರು ತಮಗೆ ಇಷ್ಟವಾದ ಪದಾರ್ಥಗಳ ಬದಲು ಸಿಕ್ಕಿದ್ದನ್ನೇ ತಿಂದು ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಜನರ   ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಳ್ಳುವ ಆತಂಕ ಎದುರಾಗಿದೆ.

Related Articles

Latest Articles