ವೃತ್ತಿ ನಿಷ್ಠೆಗೆ ಹೆಸರಾಗಿದ್ದ ಮರ್ದಾಳದ ಹಿರಿಯ ಜೀಪ್ ಚಾಲಕ ಇನ್ನಿಲ್ಲ

ಸಂಗಮ ಟೂರಿಸ್ಟ್ ಚಾಲಕ-ಮಾಲೀಕರ ಸಂಘದಿಂದ ಸಂತಾಪ

kadaba times

ಐತೂರು ಗ್ರಾಮದ ಕೊಡೆಂಕಿರಿ ನಿವಾಸಿ, ಮರ್ದಾಳದ ಹಿರಿಯ ಜೀಪ್ ಚಾಲಕ ಕುರುವಿಲ್ಲ (ಕುಂಞಿಮೊನ್) ಇಂದು ನಿಧನರಾದರು. ಅವರ ಜೀವನ ಹಾಗೂ ವೃತ್ತಿ ಬದುಕಿನ ಕುರಿತಾದ ಮಾಹಿತಿ ಇಲ್ಲಿದೆ.

kadaba times
uniq

ಮರ್ದಾಳ: ಐತೂರು ಗ್ರಾಮದ ಕೊಡೆಂಕಿರಿ ನಿವಾಸಿ, ಮರ್ದಾಳದ ಹಿರಿಯ ಜೀಪ್ ಚಾಲಕ ಕುರುವಿಲ್ಲ (ಕುಂಞಿಮೊನ್) ಅವರು ಇಂದು (ಶುಕ್ರವಾರ) ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು.

ಹಲವು ದಶಕಗಳಿಂದ ಮರ್ದಾಳ ಪರಿಸರದಲ್ಲಿ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಸಾರ್ವಜನಿಕ ವಲಯದಲ್ಲಿ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ದಿನನಿತ್ಯದ ಸಂಚಾರದ ಮೂಲಕ ನೂರಾರು ಜನರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಇವರು, ವೃತ್ತಿ ನಿಷ್ಠೆಗೆ ಹೆಸರಾಗಿದ್ದರು.

kadaba times
kadaba times

ಅವರ ನಿಧನಕ್ಕೆ ಸಂಗಮ ಟೂರಿಸ್ಟ್ ಚಾಲಕ-ಮಾಲೀಕರ ಸಂಘ ಹಾಗೂ ಸ್ಥಳೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು, ವಾತ್ಸಲ್ಯದ ಪ್ರತಿರೂಪವಾಗಿ ಬದುಕಿದವರು ಕುರುವಿಲ್ಲ ಅವರು.

ಪ್ರೀತಿಯ ಸೆಲೆಯಾಗಿ ಎಲ್ಲರ ಒಳಿತನ್ನೇ ಬಯಸುತ್ತಿದ್ದ ಅವರ ಅಗಲುವಿಕೆ ಕುಟುಂಬಸ್ಥರಿಗೆ ಹಾಗೂ ಅವರ ಸ್ನೇಹಿತ ಬಳಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇವೆ

Related Articles

Latest Articles