ಬರೆಪ್ಪಾಡಿಯಲ್ಲಿ ಪಿಕಪ್-ಜೀಪ್ ನಡುವೆ ಢಿಕ್ಕಿ; ತಪ್ಪಿದ ಭಾರಿ ಅನಾಹುತ

kadaba times

ಬೆಳ್ಳಾರೆ: ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಪಿಕಪ್ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.

kadaba times
uniq

ಪುತ್ತೂರು ತಾಲೂಕಿನ ಕಬಕ ನಿವಾಸಿ ಮಹೇಶ್ (47 ವರ್ಷ) ಎಂಬವರು ಮಾರ್ಚ್ 19, 2026 ರಂದು ಬೆಳಿಗ್ಗೆ ತಮ್ಮ KA 36 M 1625 ಸಂಖ್ಯೆಯ ಜೀಪನ್ನು ಕಾಣಿಯೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಬೆಳಿಗ್ಗೆ ಸುಮಾರು 6:15ರ ಸಮಯದಲ್ಲಿ ಬರೆಪ್ಪಾಡಿ ತಲುಪಿದಾಗ, ಪುತ್ತೂರು ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಪಿಕಪ್ ವಾಹನದ ಚಾಲಕನು ರಸ್ತೆಯ ಬಲಭಾಗಕ್ಕೆ ನುಗ್ಗಿ ಜೀಪಿಗೆ ನೇರವಾಗಿ ಢಿಕ್ಕಿ ಹೊಡೆದಿದ್ದಾನೆ.

ಅಪಘಾತದ ತೀವ್ರತೆಗೆ ಜೀಪ್ ಹಾಗೂ ಪಿಕಪ್ ಎರಡೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ. ಅದೃಷ್ಟವಶಾತ್, ಜೀಪ್ ಚಾಲಕ ಮಹೇಶ್ ಹಾಗೂ ಪಿಕಪ್ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

kadaba times
kadaba times

ಈ ಅಪಘಾತಕ್ಕೆ ಪಿಕಪ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಮಹೇಶ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 21/2026, ಕಲಂ: 281 BNS-2023 ರಂತೆ ಪ್ರಕರಣ ದಾಖಲಾಗಿದೆ.

Related Articles

Latest Articles